ಹುಡುಗಿಯರ ಹಾಟ್‌ ಫೇವರೀಟ್‌ ಪ್ರಭಾಸ್‌ಗೆ ಮ್ಯಾಟ್ರಿಮೋನಿ ವೆಬ್‌ಸೈಟ್‌ನಿಂದ ಆಫರ್‌…..?

ಮುಂಬೈ : ಅಮರೇಂದ್ರ ಬಾಹುಬಲಿ ಖ್ಯಾತಿಯ, ದಕ್ಷಿಣ ಭಾರತದ ಸುಪ್ರಸಿದ್ಧ ನಟ ಪ್ರಭಾಸ್‌ ಸದ್ಯ ಸಾಹೋ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬಾಹುಬಲಿ ಸಿನಿಮಾದ ಬಳಿಕ ಬಹುತೇಕ ಹುಡುಗಿಯರಿಗೆ ಪ್ರಭಾಸ್‌ ಮೇಲೆ ಕ್ರಶ್‌ ಆಗಿರುವುದಂತೂ ಸತ್ಯ. ಅಲ್ಲದೆ ಸಿಕ್ಕರೆ ಇಂತಹ ಹುಡುಗನೇ ಸಿಗಲಿ ಎಂದು ಅನೇಕರು ಸೋಶಿಯಲ್‌ ಮೀಡಿಯಾಗಳಲ್ಲಿ ಹೇಳಿದ್ದುಂಟು.

ಅಲ್ಲದೆ ಮೋಸ್ಟ್‌ ಎಲಿಜಬಲ್‌ ಬ್ಯಾಚುಲರ್‌ ಪ್ರಭಾಸ್‌ಗೆ ಮದುವೆ ಪ್ರಪೋಸಲ್‌ಗಳ ಸುರಿಮಳೆಯೇ ಬಂದಿದೆಯಂತೆ. ಅವರ ಪಾಪ್ಯುಲಾರಿಟಿಯನ್ನು ಗಮನದಲ್ಲಿಟ್ಟುಕೊಂಡು 2 ಮ್ಯಾಟ್ರಿಮೋನಿ  ವೆಬ್‌ಸೈಟ್‌ಗಳು ತಮ್ಮ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡುವಂತೆ ಪ್ರಭಾಸ್‌ಗ ಆಫರ್ ಮಾಡಿವೆಯಂತೆ. ಅಲ್ಲದೆ ಇದಕ್ಕಾಗಿ ಭರ್ಜರಿ ಸಂಭಾವನೆ ನೀಡೋದಾಗಿಯೂ ಹೇಳಿವೆಯಂತೆ. ಆದರೆ ಪ್ರಭಾಸ್ ಮಾತ್ರ ಇದಕ್ಕಿನ್ನೂ ಗ್ರೀನ್‌ ಸಿಗ್ನಲ್‌ ನೀಡಿಲ್ಲ.

ಸಾಹೋ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಹಿನ್ನೆಲೆಯಲ್ಲಿ ಮ್ಯಾಟ್ರಿಮೋನಿ ಆಫರ್‌ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ. ಆದರೆ ಪ್ರಭಾಸ್‌ ಮ್ಯಾಟ್ರಿಮೋನಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

 

Leave a Reply

Your email address will not be published.

Social Media Auto Publish Powered By : XYZScripts.com