Ashes Cricket : ಸ್ಟೀವ್ ಸ್ಮಿತ್ ಅಮೋಘ ದ್ವಿಶತಕ : ಬೃಹತ್ ಮೊತ್ತ ಸೇರಿಸಿದ ಆಸೀಸ್

ಪರ್ತ್ ನ ವಾಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಶನಿವಾರ 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 549 ರನ್ ಮೊತ್ತ ಸೇರಿಸಿರುವ ಆಸೀಸ್ 146 ರನ್ ಮುನ್ನಡೆ ಸಾಧಿಸಿದೆ.

ಅಮೋಘ ದ್ವಿಶತಕ ಬಾರಿಸಿದ ನಾಯಕ  ಸ್ಟೀವ್ ಸ್ಮಿತ್ 229 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಬಾರಿಸಿದ ಮಿಚೆಲ್ ಮಾರ್ಷ್ 181 ರನ್ ಗಳಿಸಿದರು. ಸ್ಟೀವ್ ಸ್ಮಿತ್ ಹಾಗೂ ಮಿಚೆಲ್ ಮಾರ್ಷ್ 301 ರನ್ ಜೊತೆಯಾಟವಾಡಿ ಮೂರನೇ ದಿನದಾಟದ ಅಂತ್ಯಕ್ಕೆ ಅಜೇಯರಾಗುಳಿದಿದ್ದಾರೆ.

ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಒಂದೇ ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ ಸ್ಪಿನ್ನರ್ ಮೋಯಿನ್ ಅಲಿ ಶಾನ್ ಮಾರ್ಷ್ ವಿಕೆಟ್ ಪಡೆಯುವಲ್ಲಿ ಸಫಲರಾದರು. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು, ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡ ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸಿದೆ. ಮೊದಲೆರಡು ಟೆಸ್ಟ್ ಗೆದ್ದಿರುವ ಆಸೀಸ್ ಈಗಾಗಲೇ ಸರಣಿಯಲ್ಲಿ 2-0 ಯಿಂದ ಮುನ್ನಡೆಯಲ್ಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com