ಈ ನಾಲ್ಕು ರಾಶಿಯವರನ್ನು ಮದುವೆಯಾದರೆ ಅವರೇ ಅದೃಷ್ಟವಂತರಂತೆ…..

ಪ್ರತಿಯೊಬ್ಬರೂ ಸಹ ಜೀವನದಲ್ಲಿ ವಿವಾಹ ಬಂಧನಕ್ಕೆ ಒಳಪಡುತ್ತಾರೆ. ಇದು ಸಮಾಜದ ಪದ್ದತಿ ಸಹ ಹೌದು. ವಿವಾಹ ಎಂದರೆ ಎಲ್ಲರಿಗೂ ಸಂಭ್ರಮವಿರುತ್ತದೆ. ಇದರ ಜೊತೆಗೆ ಜವಾಬ್ದಾರಿಯೂ ಹೆಚ್ಚಿರುತ್ತದೆ. ಜೀವನ ಸಂಗಾತಿಯ ಆಯ್ಕೆಯಿಂದ ಹಿಡಿದು ಎಲ್ಲಾ ವಿಚಾರದಲ್ಲೂ ಸರಿಯಾದ ನಿರ್ಧಾರ ಕೈಗೊಂಡರೆ ಮಾತ್ರ ದಾಂಪತ್ಯ ಜೀವನ ಸುಖವಾಗಿರುತ್ತದೆ.

ಸಂಗಾತಿಯನ್ನು ಆಯ್ಕೆ ಮಾಡುವಾಗ ನಿಮ್ಮ ಅಭಿರುಚಿಗೆ ತಕ್ಕಂತೆ, ನಿಮ್ಮ ಗುಣ, ಸ್ವಭಾವಕ್ಕೆಹೊಂದಿಕೆಯಾಗುವಂತಹವರನ್ನು ಹುಡುಕಿಕೊಂಡರೆ ಜೀವನ ಸಂತೋಷವಾಗಿರುತ್ತದೆ.

ಇನ್ನು ಜ್ಯೋತಿಷ್ಯ ಶಾಸ್ತ್ರ ಸಹ ಮದುವೆ ಕುರಿತು, ರಾಶಿಗಳ ಕುರಿತು ಮಾಹಿತಿ ನೀಡುತ್ತದೆ. 12 ರಾಶಿಗಳಲ್ಲಿ ನಾಲ್ಕು ರಾಶಿಯ ವ್ಯಕ್ತಿಗಳು ದಾಂಪತ್ಯದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಾರೆ ಎನ್ನಲಾಗಿದೆ.

ಮಿಥುನ : ಈ ರಾಶಿಯವರನ್ನು ವಿವಾಹವಾದರೆ ಸದಾ ಸಂತೋಷವಾಗಿರುತ್ತೀರಿ. ಈ ರಾಶಿಯ ವ್ಯಕ್ತಿಗಳಿಗೆ ನಗು ಎಂದರೆ ಇಷ್ಟ. ಸದಾ ನಗು ನಗುತ್ತಾ ಕಾಲ ಕಳೆಯುವ ಇವರು ಸಿಟ್ಟಿಗೆ ದೂರವಾಗಿರುತ್ತಾರೆ. ಸದಾ ಹಾಸ್ಯ ಮಾಡಿಕೊಂಡು ತಾವು ಸಂತೋಷವಾಗಿರುವುದಲ್ಲದೆ, ಇತರರನ್ನೂ ನಗಿಸುತ್ತಿರುತ್ತಾರೆ.
ಈ ರಾಶಿಯ ಹುಡುಗರು, ಎಲ್ಲರಿಗೂ ಗೌರವವನ್ನು ನೀಡುವ ಗುಣವುಳ್ಳವರಾಗಿರುತ್ತಾರೆ.

ಹೆಚ್ಚು ಮಾತನಾಡುವ ಪ್ರವೃತ್ತಿಯುಳ್ಳ ಇವರು, ವಿಶ್ವಾಸಾರ್ಹ ವ್ಯಕ್ತಿಯಾಗಿರುತ್ತಾರೆ. ಫ್ಯಾಮಿಲಿ ಮೆನ್ ಆಗಿರುವ ಇವರಿಗೆ ಸಂಗಾತಿ ಅಥವಾ ಮನೆಯವರ ಬಗ್ಗೆ ಹೆಚ್ಚಿಗಿನ ಕಾಳಜಿ ವಹಿಸುತ್ತಾರೆ.ಈ ರಾಶಿಯ ವ್ಯಕ್ತಿಗಳೊಂದಿಗೆ ವಿವಾಹವಾದರೆ ಸದಾ ಸಂತೋಷವಾಗಿರುತ್ತೀರಿ.
ಕರ್ಕಾಟಕ : ಈ ರಾಶಿಯ ಪುರುಷರು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇವರೂ ಸಹ ಕೌಟುಂಬಿಕ ವ್ಯಕ್ತಿಯಾಗಿದ್ದು, ಮನೆಯವರ ಜೊತೆಯೇ ಹೆಚ್ಚಿನದಾಗಿ ಬೆರೆಯುತ್ತಾರೆ. ಆದರ್ಶ ವ್ಯಕ್ತಿತ್ವ ಹೊಂದಿರುವ ಇವರು ಎಲ್ಲರೊಂದಿಗೂ ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ. ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುವ ಆಸೆ ಇವರಿಗಿರುತ್ತದೆ. ತನ್ನ ಸಂಗಾತಿಯ ಬೇಕು ಬೇಡ ಎಲ್ಲವನ್ನೂ ಚೆನ್ನಾಗಿ ಅರಿತಿರುತ್ತಾರೆ.
ಇನ್ನೊಬ್ಬರ ಖುಷಿಯಲ್ಲೇ ತಮ್ಮ ಖುಷಿಯನ್ನು ಕಾಣಬಯಸುವ ಇವರು, ಸ್ನೇಹಿತರು, ಕುಟುಂಬಸ್ಥರ ಎಲ್ಲಾ ಕಷ್ಟ ನಷ್ಟಗಳಲ್ಲಿ ಪಾಲುದಾರರಾಗಿರುತ್ತಾರೆ. ಸೂಕ್ಷ್ಮಮತಿಯಾಗಿರುವ ಇವರಿಗೆ ಚಿಕ್ಕ ಪುಟ್ಟ ವಿಚಾರಗಳೂ ಬೇಸರ ಉಂಟು ಮಾಡುತ್ತದೆ.

ತುಲಾ : ಇವರಿಗೆ ಸಂಗಾತಿಯ ಸಂತೋಷವೇ ಮೊದಲು. ಇನ್ನೆಲ್ಲ ವಿಷಯಗಳು ನಂತರ ಎಂಬಂತ ಮನಸ್ಥಿತಿಯವರಾಗಿರುತ್ತಾರೆ. ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿರುವ ಇವರು, ಸಂಗಾತಿಯ ಎಲ್ಲಾ ಆಸೆ ಆಕಾಂಕ್ಷೆಗಳನ್ನು ನೆರವೇರಿಸುತ್ತಾರೆ. ಸದಾ ಉಲ್ಲಾಸದಿಂದಿರುವ ಇವರು, ಸಂಗಾತಿಯ ಎಲ್ಲಾ ಕೆಲಸಗಳನ್ನು ಹಂಚಿಕೊಳ್ಳುವವರಾಗಿರುತ್ತಾರೆ. ಇನ್ನೊಬ್ಬರ ಸಂತೋಷಕ್ಕಾಗಿ ಏನನ್ನಾದರೂ ಮಾಡಲು ಸಿದ್ಧರಿರುತ್ತಾರೆ. ತಾನು ಮಾಡುವ ಕೆಲಸದ ಬಗ್ಗೆ ಹೆಚ್ಚಿನ ಶ್ರದ್ಧೆ ಹೊಂದಿದವರಾಗಿದ್ದು, ಸಂಗಾತಿಯ ವಿಚಾರದಲ್ಲಿ ಎಲ್ಲಾ ಕೆಲಸಗಳನ್ನು ಬದಿಗಿಡುವ ಮನಸ್ಥಿತಿ ಇವರದ್ದಾಗಿರುತ್ತದೆ.

ವೃಶ್ಚಿಕ :  ಸೃಜನಶೀಲ ವ್ಯಕ್ತಿತ್ವ ಹೊಂದಿರುವ ಇವರು, ಈ ರಾಶಿಯವರು ಉತ್ತಮ ಆಯ್ಕೆಯಾಗಿರುತ್ತಾರೆ. ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಇವರಿಗೆ ಪ್ರೀತಿಯೇ ಎಲ್ಲಾ. ನಿಮ್ಮಿಂದ ಇವರು ಬಯಸುವುದು ಪ್ರೀತಿಯನ್ನು ಮಾತ್ರ. ಸದಾ ಆಶಾವಾದಿಗಳಾಗಿರುವ ಇವರು , ನಿಮಮ ಕಷ್ಟ-ಸುಖಗಳಲ್ಲಿ ಸಮಪಾಲು ಹಂಚಿಕೊಳ್ಳುತ್ತಾರೆ.
ಇವರಿಗೆ ವಾಕ್ಚತುರತೆ ಹೆಚ್ಚಿರುತ್ತದೆ. ಆದರೆ ಸುಳ್ಳು ಹೇಳುವುದು ಇವರ ಅಭ್ಯಾಸವಾಗಿರುತ್ತದೆ. ಇದೊಂದೇ ಕಾರಣದಿಂದ ಇವರಲ್ಲಿ ಜನ ಹೆಚ್ಚಿನ ವಿಷಯಗಳನ್ನು ಪ್ರಸ್ತಾಪಿಸಲು ಇಷ್ಟ ಪಡುವುದಿಲ್ಲ. ಆದರೆ ಭಾವನಾತ್ಮಕ ಜೀವಿಯಾಗಿರುವ ಇವರು, ಚಿಕ್ಕ ಚಿಕ್ಕ ವಿಷಯಕ್ಕೂ ನೊಂದುಕೊಳ್ಳುವ ಸ್ವಭಾವದವರಾಗಿರುತ್ತಾರೆ. ನಿಮ್ಮ ವೈಯಕ್ತಿಕ ಹಾಗೂ ಖಾಸಗಿತನಕ್ಕೆ ಬೆಲೆ ನೀಡುವ ಇವರು, ತನ್ನ ಕುಟುಂಬಕ್ಕಾಗಿ ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಅಲ್ಲದೆ ಇವರಿಗೆ ಆಸೆ ಆಕಾಂಕ್ಷೆಗಳು ಹೆಚ್ಚಿದ್ದು, ಹಂಬಲವುಳ್ಳ ವ್ಯಕ್ತಿಯಾಗಿರುತ್ತಾರೆ.

Leave a Reply

Your email address will not be published.

Social Media Auto Publish Powered By : XYZScripts.com