WATCH : ಹನಿಮೂನ್ ಜೋಡಿಗೆ ಡಿವಿಲಿಯರ್ಸ್ special wish : Abd ಹೇಳಿದ್ದೇನು..?

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಡಿಸೆಂಬರ್ 11 ರಂದು ಇಟಲಿಯಲ್ಲಿ ವಿವಾಹವಾಗಿದ್ದರು. ಕ್ರಿಕೆಟ್ ಹಾಗೂ ಸಿನೆಮಾ ಲೋಕದ ಗಣ್ಯರಿಂದ, ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದುಬಂದಿತ್ತು.

ನವವಿವಾಹಿತ ವಿರಾಟ್ ಹಾಗೂ ಅನುಷ್ಕಾ ಜೋಡಿಗೆ ಸೌತ್ ಆಫ್ರಿಕಾ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಶುಭ ಕೋರಿರುವ ಡಿವಿಲಿಯರ್ಸ್ ‘ ವಿರಾಟ್ ಹಾಗೂ ಅನುಷ್ಕಾ, ಮದುವೆಯಾಗಿದ್ದಕ್ಕೆ ಅಭಿನಂದನೆಗಳು. ಮದುವೆ ಸುದ್ದಿಯಿಂದ ತುಂಬ ನನಗೆ ಆಶ್ಚರ್ಯವಾಯಿತು. ನೀವಿಬ್ಬರೂ ಪರಸ್ಪರ ತುಂಬ ಸಂತೋಷವಾದ ಜೀವನ ನಡೆಸಲಿದ್ದೀರಿ. ಹೆಚ್ಚು ಮಕ್ಕಳಾಗಲಿ ಎಂದು ಆಶಿಸುತ್ತೇನೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com