ಹಿಂದುಗಳು ಕತ್ತಿ ಹಿಡಿಯಿರಿ, ಧರ್ಮ ವಿರೋಧಿಗಳ ತಲೆ ಕಡಿಯಿರಿ : ಶಾಸಕ ರಾಜಾಸಿಂಗ್‌

ಯಾದಗಿರಿ : ಉತ್ತರ ಕರ್ನಾಟಕದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಹೈದರಾಬಾದ್‌ ಶಾಸಕ ರಾಜಾಸಿಂಗ್‌ ಸುದ್ದಿಯಾಗಿದ್ದಾರೆ.

ವಿಶ್ವ ಹಿಂದೂ ವಿರಾಟ್‌ ಸಮಾವೇಶದಲ್ಲಿ ಮಾತನಾಡಿದ ಶಾಸಕ ರಾಜಾಸಿಂಗ್‌, ಪ್ರತಿಯೊಬ್ಬ ಹಿಂದೂ ಸಹ ಮನೆಯಲ್ಲಿ ತಲ್ವಾರ್‌ ಇಟ್ಟುಕೊಳ್ಳಬೇಕು, ಧರ್ಮ ವಿರೋಧಿಗಳ ತಲೆ ಕಡಿಯಬೇಕು ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಶಾಸಕರು ಈ ರೀತಿ ಹೇಳಿಕೆ ನೀಡಿದ್ದು, ನೆರೆದಿದ್ದವರು ಕತ್ತಿ ಎತ್ತಿ ಕೇಕೆ ಹಾಕಿ ಕುಣಿದಿದ್ದಾರೆ.

ಇನ್ನು ಈ ಕುರಿತು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ಹೇಳಿಕೆ ನೀಡಿದ್ದು, ದೇಶ ಹಾಗೂ ಧರ್ಮದ ಸುರಕ್ಷತೆಗಾಗಿ ಹಿಂದೂಗಳು ಮನೆಯಲ್ಲಿ ಖಡ್ಗ ಇಟ್ಟುಕೊಳ್ಳಬೇಕು. ಇದನ್ನು ಕಳೆದ 15 ವರ್ಷಗಳಿಂದಲೂ ಹೇಳಿಕೊಂಡು ಬಂದಿದ್ದೇನೆ. ತಲ್ವಾರ್‌ ಹಿಡಿಯಬೇಕಾಗಿರುವುದು ಇನ್ಯಾರನ್ನೋ ಹೊಡೆಯಲು ಅಥವಾ ಜಾತಿ ಜಾತಿಗಳ ಮಧ್ಯೆ ಕಲಹ ಆರಂಭಿಸಲು ಅಲ್ಲ. ನಮ್ಮ ದೇಶ, ಧರ್ಮದ ರಕ್ಷಣೆಗಾಗಿ ಎಂದಿದ್ದಾರೆ.

ಶಿರಸಿ, ಹೊನ್ನಾವರದಲ್ಲಿ ಪರೇಶ್‌ ಮೇಸ್ತಾ ಹತ್ಯೆ ಸಂಬಂಧ ನಡೆದ ಕೋಮುಗಲಭೆ ಇನ್ನೇನು ತಣ್ಣಗಾಗುತ್ತಿದೆ ಎನ್ನುವಾಗಲೇ ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರಚೋದನೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com