ಶುರುವಾಯ್ತು ‘ಲೇಡಿ ಲಕ್’ : ಮದುವೆಯಾದ ಮೊದಲ ವಾರವೇ ಕೊಹ್ಲಿಗೆ ಗುಡ್ ನ್ಯೂಸ್..!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಟಲಿಯಲ್ಲಿ ಸೋಮವಾರ ವಿವಾಹವಾಗಿದ್ದರು. ಮದುವೆಯಾದ ಮೊದಲ ವಾರದಲ್ಲಿಯೇ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪಾಲಿಗೆ ‘ ಲೇಡಿ ಲಕ್ ‘ ಶುರುವಾದಂತಿದೆ. ಬಿಸಿಸಿಐ ವಿರಾಟ್ ಸೇರಿದಂತೆ ಟೀಮ್ ಇಂಡಿಯಾದ ಕ್ರಿಕೆಟಿಗರಿಗೆ ಒಂದು ಗುಡ್ ನ್ಯೂಸ್ ನೀಡಿದೆ.

ಸುಪ್ರೀಂ ಕೋರ್ಟ್ ರಚಿಸಿರುವ ಆಡಳಿತ ಸಮಿತಿ (Committee of Administrators), ಆಟಗಾರರ ಸಂಬಳ ಹೆಚ್ಚಳ ಕುರಿತಂತೆ ಬಿಸಿಸಿಐಗೆ ವರದಿಯೊಂದನ್ನು ಸಲ್ಲಿಸಲಿದೆ. ಈ ವರದಿಯನ್ನು ಬಿಸಿಸಿಐ ಪರಿಗಣಿಸಿ ಜಾರಿಗೆ ತಂದರೆ, ಟೀಮ್ ಇಂಡಿಯಾದಲ್ಲಿ ಆಡುವ ಹಾಗೂ ದೇಶಿ ಕ್ರಿಕೆಟ್ ಆಡುವ ಹಿರಿಯ ಆಟಗಾರರ ಸಂಬಳ ದುಪ್ಪಟ್ಟಾಗಲಿದೆ.

ಪ್ರಸಕ್ತ ವಾರ್ಷಿಕ 180 ಕೋಟಿಯಿರುವ ವಿರಾಟ್ ಕೊಹ್ಲಿ ಸಂಬಳ ಸಂಬಳ ಡಬಲ್ ಅಂದರೆ, 380 ಕೋಟಿ ಕೋಟಿ ಆಗಲಿದೆ. ತಿಂಗಳಿಗೆ ಸುಮಾರು 5 ಕೋಟಿಯಿರುವ ವಿರಾಟ್ ಕೊಹ್ಲಿ ಸಂಬಳ 10 ಕೋಟಿಯನ್ನು ಮೀರಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com