ಪ್ರತ್ಯೇಕ ಲಿಂಗಾಯಿತ ಧರ್ಮ ಬೇಕೆನ್ನುವವರ ಮನೆ ಹೆಣ್ಣು ಮಕ್ಕಳು ತಾಳಿ, ಕುಂಕುಮ ತೆಗೆಯಲಿ……!

ವಿಜಯಪುರ : ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಬೇಕು ಎನ್ನುವವರ ಮನೆ ಹೆಣ್ಣುಮಕ್ಕಳು ತ ಮ್ಮ ಕೊರಳಲ್ಲಿಯ ತಾಳಿ, ಹಣೆ‌ ಮೇಲಿನ ಕುಂಕುಮ ಅಳಿಸಿ ನಂತರ ಹೋರಾಟ ನಡೆಸಲಿ ಎಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಶಿವ ಪ್ರಕಾಶ ಶಿವಾಚಾರ್ಯ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿ ಇಂಥ ಹೇಳಿಕೆ ನೀಡುವ ಮೂಲಕ ಪ್ರತ್ಯೇಕತೆಗೆ ಹೋರಾಟ ನಡೆಸುತ್ತಿರುವವರಿಗೆ ಚಾಟಿ ಬೀಸಿದ್ದಾರೆ. ಬಸವಣ್ಣನವರ ತತ್ತ್ವ ಪಾಲಿಸುವುದಾದರೆ ಮೊದಲು ತಮ್ಮ ಹೆಣ್ಣು ಮಕ್ಕಳ ಹಣೆ ಮೇಲಿನ ಕುಂಕುಮ, ಕಾಲುಂಗುರ, ಕೊರಳಲ್ಲಿನ ತಾಳಿ ತೆಗೆದು ಹಾಕಿ ರುದ್ರಾಕ್ಷಿ ಕಟ್ಟಿಕೊಳ್ಳಲಿ. ಜೊತೆಗೆ ಜಗಲಿ ಮೇಲಿನ ದೇವರನ್ನು ತೆಗೆದು ಜೀವಿಸಲಿ ಎಂದು ಸವಾಲ್ ಹಾಕಿದ್ದಾರೆ.

ಹಣಬಲ, ತೋಳ್ಬಲದಿಂದ ಮಠಾಧೀಶರನ್ನು ಖರೀದಿಸಿ ವೀರಶೈವ ಧರ್ಮ ಒಡೆವ ಕೆಲಸ ಮಾಡಲಾಗುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ವೇನಿದ್ದರೂ ಮೇ ತಿಂಗಳವರೆಗೆ ಮಾತ್ರ. ಅಲ್ಲಿಯವರೆಗೂ ಧರ್ಮದ ಹೆಸರಿನಲ್ಲಿ ಕಲುಷಿತ ವಾತಾವರಣ ಇರಲಿದೆ ಎಂದರು. ಲಿಂಗಾಯತ ಒಂದೇ ಎಂದು ಸಾರುವ ಬಸವ ಧರ್ಮದವರು 99 ಉಪ ಜಾತಿಗಳಲ್ಲಿ ಪರಸ್ಪರ ವೈವಾಹಿಕ ಸಂಬಂಧ ಬೆಳೆಸಿ ತೊರಿಸಲಿ ಎಂದ್ರು. ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಗೆ ಲಿಂಗಾಯತ ಸ್ವಾಮೀಜಿಗಳು ಹರಿಹಾಯ್ದಿದ್ದಾರೆ. ವಿವಾದ ಸೃಷ್ಟಿಸೊ ಇಂಥ ಹೇಳಿಕೆಗಳನ್ನು ಸ್ವಾಮಿಗಳು ಬಿಡುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published.