ಮುಂದಿದೆ ಮಾರಿಹಬ್ಬ ಎಂಬುದು ಬಲಿ ಪಡೆಯುವ ಸೂಚನೆಯಾ : ಹೆಗಡೆಗೆ ಪ್ರಮೋದ್‌ ಮಧ್ವರಾಜ್‌ ಟಾಂಗ್

ಉಡುಪಿ : ಕೇಂದ್ರ ಸಚಿವ ಅನಂತ್ ಕುಮಾರ್‌ ತಮ್ಮ ಫೇಸ್‌ಬುಕ್‌ನಲ್ಲಿ ಮುಂದಿದೆ ಮಾರಿಹಬ್ಬ ಎಂದಿರುವ ವಿವಾದಾತ್ಮಕ ಸ್ಟೇಟಸ್‌ ವಿಚಾರ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿರುಗೇಟು ನೀಡಿದ್ದಾರೆ.

ಮಾರಿ ಹಬ್ಬ ಎಂಬುದು ಬಲಿ ಪಡೆಯುವ ಸೂಚನೆಯಾ ಎಂದು ಕೇಳಿರುವ ಅವರು, ಮುಂದಿನ ಚುನಾವಣೆಯ ಗೆಲುವಿಗಾಗಿ ಗಲಭೆ ಹಬ್ಬಿಸುವ ಯತ್ನ ನಡೆಸಲಾಗುತ್ತಿದೆ. ಅಮಿತ್‌ ಶಾ ಸೂಚನೆ ಮೇರೆಗೆ ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಅಮಿತ್ ಶಾ ಪ್ರತಾಪ್‌ ಸಿಂಹನಿಗೆ ಗಲಾಟೆ ಮಾಡುವಂತೆ ಹೇಳಿದ್ದರಲ್ಲ ಅದರಂತೆ ಇತರ ಬಿಜೆಪಿಗರಿಗೂ ಹೇಳಿರಬೇಕು, ಕೇಂದ್ರ ಸಚಿವನಾಗಿ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಇಂತಹವರ ಬಗ್ಗೆ ಜನರೇ ನಿರ್ಧಾರ ತಳೆಯುತ್ತಾರೆ ಎಂದಿದ್ದಾರೆ.

ಕಾಂಗ್ರೆಸ್‌ ಎಂಬ ಮನೆಯ ಹಿರಿಯಜ್ಜನಂತೆ ಜಾಫರ್ ಷರೀಫ್‌ ಇದ್ದಾರೆ. ಎಲ್ಲಾ ಮನೆಯಲ್ಲೂ ಅಜ್ಜಂದಿರು ಪಿರಿ ಪರಿ ಎನ್ನುತ್ತಿರುತ್ತಾರೆ. ಪಕ್ಷದ ಹಿರಿಯ ನಾಯಕರು ಅಸಮಾಧಾನಕ್ಕೆ ಪರಿಹಾರ ಕಂಡುಹಿಡಿಯುವುದಾಗಿ ಹೇಳಿದ್ದಾರೆ. ರಾಜ್ಯದ ಚುನಾವಣಾ ಪ್ರಚಾರಕ್ಕೆ ಶಾ, ಮೋದಿ ಬರಲಿ. ಆದರೆ ರಾಜ್ಯದಲ್ಲಿ ಗಲಭೆ ಎಬ್ಬಿಸುವುದು ಬೇಡ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com