ಗದಗ : ಬಾಂಬ್ ಸ್ಫೋಟಿಸಲು ಉಗ್ರರಿಂದ ಒತ್ತಾಯ : ಆತ್ಮಹತ್ಯೆಗೆ ಯತ್ನಿಸಿದ ಯುವಕ

ಗದಗ : ಟೇರರಿಸಂ ಮಾಡುವಂತೆ ಒತ್ತಾಯ ಮಾಡಲಾಗಿದೆ ಎಂದು ಆರೋಪಿಸಿ ಯುವಕನೊಬ್ಬ ಪತ್ರ ಬರೆದಿಟ್ಟು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಉಗ್ರಗಾಮಿಗಳು ಬಾಂಬ್ ಸ್ಪೋಟಿಸಲು ನನಗೆ ಪೀಡಿಸುತ್ತಿದ್ದರು ಅಂತ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಗದಗ ಜಿಲ್ಲೆ ರೋಣ ತಾಲೂಕಿನ ಗಜೇಂದ್ರಗಡ ಪಟ್ಟಣದ ಬಳಿ ಘಟನೆ ನಡೆದಿದೆ.  ಚಿಂತಾಜನಕ ಸ್ಥಿತಿಯಲ್ಲಿ ಇದ್ದ ಯುವಕನಿಗೆ ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಮೂಲತಃ ಹುನಗುಂದ ತಾಲೂಕಿನ ತುರಿಹಾಳ ಗ್ರಾಮದ ಯುವಕ ಶರಣಪ್ಪ ನಾಗರಾಳ ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಸಂಬಂಧಿಕರು ಬಾಗಲಕೋಟೆ ಜಿಲ್ಲೆ ಇಳಕಲ್ ಕರೆದುಕೊಂಡು ಹೋಗಿದ್ದಾರೆ.

ಮೈಸೂರಿನ ಮಹ್ಮದ ರಫೀಕ್ ಮತ್ತು ಇಸ್ಮಾಯಿಲ್ ಎಂಬುವರು ಟೇರರಿಸಂ ಮಾಡು ಅಂತ ಒತ್ತಾಯಿಸುತ್ತಿದ್ದರು. ಹೊಸ ವರ್ಷದಲ್ಲಿ ಕಾಲೇಜು ಗಳಲ್ಲಿ ಬಾಂಬ್ ಬ್ಲಾಸ್ಟ್ ‌ಮಾಡುವ ಉದ್ದೇಶ ಇತ್ತು ಅಂತ ಯುವಕ ಪತ್ರದಲ್ಲಿ ಬರೆದಿದ್ದಾನೆ. ಉಗ್ರಗಾಮಿಗಳು ನನ್ನ ಪೀಡಿಸುತ್ತಿದ್ದರು ಬಾಂಬ್ ಸ್ಪೋಟಿಸಲು ನನಗೆ ಪೀಡಿಸುತ್ತಿದ್ದರು. ಮೈಸೂರಿನ ಮಹ್ಮದ ರಫೀಕ್ ಮತ್ತು ಇಸ್ಮಾಯಿಲ್ ಎಂಬುವರು ಟೇರರಿಸಂ ಮಾಡು ಅಂತ ಒತ್ತಾಯಿಸುತ್ತಿದ್ದರು.

ಮೈಸೂರಿನ ವಿದ್ಯಾ ವಿಕಾಸ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬಾಂಬ್ ಫಿಕ್ಸ್ ಮಾಡಲು ಪೀಡಿಸುತ್ತಿದ್ದರು. ಹಲವು ಬಾರಿ ನನಗೆ ಶಾಕ್ ಟ್ರೀಂಟ್ ನೀಡಿದ್ದಾರೆ. ಇನ್ಸ್ಟಿಟ್ಯೂಟ್ ಗೆ ಬಾಂಬ್ ಫಿಕ್ಸ್ ಮಾಡು ಎಂದು ಪೋನ ಮಾಡಿ ಪೀಡಿಸುತ್ತಿದ್ದರು ‘ ಎಂದು ಪತ್ರದಲ್ಲಿ ಬರೆದು ಆತ್ಮಹತ್ಯೆಗೆ ಯತ್ನಿಸಿದ ಯುವಕ ಶರಣಪ್ಪ ನಾಗರಳ.

 

Leave a Reply

Your email address will not be published.

Social Media Auto Publish Powered By : XYZScripts.com