ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ತಾಜ್‌ ಮಹಲನ್ನು ಬಳಸಿಕೊಂಡ ಯೋಗಿ ಸರ್ಕಾರ

ಲಖನೌ : ಇತಿಹಾಸ ಪ್ರಸಿದ್ಧ ತಾಜ್‌ ಮಹಲ್‌ ದೇಶದ ಪ್ರಮುಖ ಪ್ರವಾಸಿ ತಾಣವಾಗಿದ್ದು, ವಿಶ್ವದ ಜನರು ಇದಕ್ಕೆ ತಲೆಬಾಗಿದ್ದಾರೆ. ಆದರೆ ಇತ್ತೀಚೆಗಷ್ಟೇ ಉತ್ತರ ಪ್ರದೇಶ ಸರ್ಕಾರ ಪ್ರವಾಸಿ ತಾಣಗಳ ಕೈಪಿಡಿಯಿಂದ ತಾಜ್‌ ಮಹಲ್‌ ಹೆಸರನ್ನು ಕೈಬಿಟ್ಟು ವಿವಾದ ಸೃಷ್ಠಿಯಾಗಿತ್ತು. ಬಳಿಕ ಸಿಎಂ ಯೋಗಿ ಆದಿತ್ಯನಾಥ್‌ ತಾಜ್‌ ಮಹಲ್‌ಗೆ ಭೇಟಿ ನೀಡಿ ಸ್ವಚ್ಛ ಭಾರತ್ ಅಭಿಯಾನ ಮಾಡಿದ ಬಳಿಕ ವಿವಾದ ತಣ್ಣಗಾಗಿತ್ತು.

ಆದರೆ ಈಗ ಯೋಗಿ ಸರ್ಕಾರ ಬಂಡವಾಳ ಹೂಡಿಕೆದಾರರನ್ನು ತನ್ನತ್ತ ಸೆಳೆಯಲು ಇದೇ ತಾಜ್ ಮಹಲನ್ನೇ ಬಳಸಿಕೊಂಡಿದೆ. ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಬಂಡವಾಳ ಹೂಡಿಕೆದಾರರ ಶೃಂಗಸಭೆ ನಡೆಯಲಿದ್ದು, ಇದಕ್ಕೆ ಹೂಡಿಕೆದಾರರನ್ನು ಸೆಳೆಯಲು, ಲೋನ್ಲಿ ಪ್ಲಾನೆಟ್‌ ನಿಯತಕಾಲಿಕೆಯಲ್ಲಿ ಅತ್ಯುತ್ತಮ ಸಾಂಸ್ಕೃತಿಕ ರಾಜ್ಯವೆಂದು ಗುರುತಿಸಿ ಉತ್ತರ ಪ್ರದೇಶಕ್ಕೆ 2016-17ರಲ್ಲಿ ಪ್ರಶಸ್ತಿ ನೀಡಲಾಗಿದೆ ಎಂದಿದ್ದು, ತಾಜ್‌ ಮಹಲ್‌ ಬಗ್ಗೆ ಹೊಗಳಿ ಬರೆಯಲಾಗಿದೆ. ಅಲ್ಲದೆ ಇಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿದ್ದು, ಹೂಡಿಕೆಗೆ ಪ್ರಶಸ್ತ  ಸ್ಥಳವೆಂದು ಕೈಪಿಡಿಯಲ್ಲಿ ಮುದ್ರಿಸಲಾಗಿದೆ.

ಅಲ್ಲದೆ ವಿವಿಧ ರಾಜ್ಯಗಳ ಜೊತೆ ಸಂಪರ್ಕ ಬೆಳೆಸಲು ಎಕ್ಸ್‌ಪ್ರೆಸ್‌ ವೇ ನಂತಹ ಅನೇಕ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com