ಫ್ಲಿಪ್‌ಕಾರ್ಟ್‌ನಲ್ಲಿ ನ್ಯೂ ಪಿಂಚ್ ಡೇಸ್ ಸೇಲ್..!! ಮಿಸ್ ಮಾಡಿದ್ರೆ ಲಾಸ್ ಗ್ಯಾರೆಂಟಿ..!!

ಫ್ಲಿಪ್‌ಕಾರ್ಟ್‌ ನ್ಯೂ ಪಿಂಚ್ ಡೇಸ್ ಸೇಲ್ ಭಾರೀ ಸದ್ದು ಮಾಡುತ್ತಿದೆ. ಇದೇ ಡಿಸೆಂಬರ್ 15 ರಿಂದ 17ರ ವರೆಗೆ ಈ ಸೇಲ್ ನಡೆಯಲಿದ್ದು, ಈ ಭಾರಿ ಸ್ಮಾರ್ಟ್‌ಫೋನ್ ಗಳ ಸೇಲ್ ಭರ್ಜರಿಯಾಗಿದೆ. ಮೊಬೈಲ್‌ಗಳ ಮೇಲೆ ಭಾರೀ ಡಿಸ್ಕೌಂಟ್ ಅನ್ನು ಕಾಣಬಹುದಾಗಿದ್ದು, ಮೂರು ದಿನಗಳ ಭರ್ಜರಿ ಸೇಲ್ ಇದಾಗಿದೆ.
ಫ್ಲಿಪ್‌ಕಾರ್ಟ್‌ ನ್ಯೂ ಪಿಂಚ್ ಡೇಸ್ ಸೇಲ್ ನಲ್ಲಿ ಲೆನೊವೊ K8 ಪ್ಲಸ್, ಗ್ಯಾಲಾಕ್ಸಿ ಒನ್ 5, ಗ್ಯಾಲಕ್ಸಿ J3 ಪ್ರೊ ಮತ್ತು ಇತರ ಗ್ಯಾಲಕ್ಸಿ ಫೋನ್‌ಗಳ ಮೇಲೆ ಆಫರ್ ಅನ್ನು ಕಾಣಬಹುದಾಗಿದೆ. ಮುಂದೆ ಯಾವುದೇ ದಿನಗಳಲ್ಲಿ ಈ ಮಾದರಿಯ ಸೇಲ್‌ಗಳು ಕಾಣಿಸುವುದಿಲ್ಲ ಎನ್ನಬಹುದಾಗಿದೆ.

SAMSUNG GALAXY J3 PRO
2 GB RAM ಹೊಂದಿರುವ ಗ್ಯಾಲಕ್ಸಿ J3 ಪ್ರೊ ಸ್ಮಾರ್ಟ್‌ಫೋನ್ ರೂ 6,990ಕ್ಕೆ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಈ ಹಿಂದೆ ರೂ 8,490ಕ್ಕೆ ದೊರೆಯುತ್ತಿತ್ತು ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 1.2 GHz ಕ್ವಾಡ್ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 410 ಪ್ರೊಸೆಸರ್ ಕಾಣಬಹುದಾಗಿದೆ.

SAMSUNG GALAXY ONE 5
ಗ್ಯಾಲಕ್ಸಿ ಒನ್ 5 ಸ್ಮಾರ್ಟ್‌ಫೋನ್‌ ರೂ.6,490ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ನಡೆಲಿದೆ. 1.3GHz ಕ್ವಾಡ್-ಕೋರ್ ಎಕ್ಸಿನೋಸ್ 3475 ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ 1.5GB RAM ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 5.1 ಹಾಗೂ 2600mAh ಬ್ಯಾಟರಿಯನ್ನು ಹೊಂದಿದೆ.

SAMSUNG GALAXY ON MAX
4 GB RAM ಹೊಂದಿರುವ ಗ್ಯಾಲಕ್ಸಿ ಆನ್ ಮ್ಯಾಕ್ಸ್ ರೂ 14,900ಕ್ಕೆ ಇಲ್ಲಿ ದೊರೆಯಲಿದೆ. ಈ ಹಿಂದೆ ಗ್ಯಾಲಕ್ಸಿ ಆನ್ ಮ್ಯಾಕ್ಸ್ ರೂ.16,900ಕ್ಕೆ ದೊರೆಯುತ್ತಿತ್ತು ಎನ್ನಲಾಗಿದೆ. 1.69GHz ಆಕ್ಟಾ ಕೋರ್ ಮೀಡಿಯಾ ಟೆಕ್ MTK P25 ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ನ್ಯಾಗಾದಲ್ಲಿ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದೆ.

LENOVO K8 PLUS
ಲೆನೊವೊ ಕೆ 8 ಪ್ಲಸ್ ಸ್ಮಾರ್ಟ್‌ಫೋನ್ ಈ ಹಿಂದೆ ರೂ. 10,999ಕ್ಕೆ ಮಾರಾಟವಾಗುತ್ತಿದ್ದು, ಈ ಸೇಲ್‌ನಲ್ಲಿ ರೂ.8,999ಕ್ಕೆ ದೊರೆಯಲಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ ಪಿ 25 ಪ್ರೊಸೆಸರ್ 3 GB RAM, 32 GB ಇಂಟರ್ನಲ್ ಮೆಮೊರಿ ಮತ್ತು 4000mAh ಬ್ಯಾಟರಿಯನ್ನು ಹೊಂದಿದೆ.

OPPO F3 PLUS
ಒಪ್ಪೋ F3 ಪ್ಲಸ್ ಸ್ಮಾರ್ಟ್‌ಫೋನ್‌ ರೂ.17,990ಕ್ಕೆ ಮಾರಾಟವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ ರೂ.22,990ಕ್ಕೆ ದೊರೆಯುತ್ತಿತ್ತು. 1.95GHz ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 653 ಪ್ರೊಸೆಸರ್ ಹಾಗೂ 4000mAh ಬ್ಯಾಟರಿ ಈ ಸ್ಮಾರ್ಟ್‌ಫೋನ್‌ನಲ್ಲಿದೆ.

Leave a Reply

Your email address will not be published.

Social Media Auto Publish Powered By : XYZScripts.com