ಶೀಘ್ರವೇ ಸೋನಿಯಾ ಗಾಂಧಿ ನಿವೃತ್ತಿ : ನಾಳೆಯಿಂದ ಕಾಂಗ್ರೆಸ್‌ನಲ್ಲಿ ರಾಹುಲ್‌ ಪರ್ವ ಶುರು

ದೆಹಲಿ : 19 ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿದ್ದ ಸೋನಿಯಾ ಗಾಂಧಿ ಶೀಘ್ರವೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.

ಪುತ್ರ ರಾಹುಲ್ ಗಾಂಧಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಸೋನಿಯಾ ಗಾಂಧಿ ನಿವೃತ್ತಿ ಪಡೆಯಲು ಇದು ಸೂಕ್ತ ಕಾಲ ಎಂದು ಸೋನಿಯಾ ಗಾಂಧಿ ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಶನಿವಾರ (ಡಿ.16) ರಂದು ರಾಹುಲ್‌ ಗಾಂಧಿ ಅಧಿಕಾರ ಸ್ವೀಕರಿಸಲಿದ್ದು, ಇನ್ನು ಮುಂದೆ ಎಲ್ಲಾ ಕೆಲಸಗಳ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ.

ಆದರೆ ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ ಪಡೆಯುತ್ತಿಲ್ಲ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ. ಈ ಕುರಿತು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು, ಸ್ನೇಹಿತರಲ್ಲಿ ನನ್ನ ವಿನಂತಿ, ಇದು ಸುಳ್ಳು ಸುದ್ದಿ. ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ ಪಡೆಯುತ್ತಿಲ್ಲ. ಅಧ್ಯಕ್ಷ ಸ್ಥಾನದಿಂದ ಮಾತ್ರ ನಿವೃತ್ತರಾಗಿದ್ದಾರೆಯೇ ಹೊರತು ರಾಜಕೀಯದಿಂದಲ್ಲ. ಅವರ ಬುದ್ದಿವಂತಿಕೆ, ಆಶೀರ್ವಾದ ಮತ್ತು ಕಾಂಗ್ರೆಸ್‌ ಸಿದ್ಧಾಂತಕ್ಕೆ ಅವರು ಬೇಕು. ಇನ್ನು ಮುಂದೆಯೂ ಅವರು ನಮಗೆ ಮಾರ್ಗದರ್ಶನ ಮಾಡುತ್ತಾರೆ ಎಂದಿದ್ದಾರೆ.

 

Leave a Reply

Your email address will not be published.