ಮುಸ್ಲಿಂ ಮಹಿಳೆ ಬಾಯಲ್ಲಿ ಕೃಷ್ಣ ಎಂದು ಹೇಳಿಸಿ ಶಸ್ತ್ರ ಚಿಕಿತ್ಸೆ ಮಾಡಿದ ಡಾಕ್ಟರ್‌…ಮುಂದಾಗಿದ್ದೇನು….?

ಚಿಕ್ಕಬಳ್ಳಾಪುರ : ವೈದ್ಯರೊಬ್ಬರು ಮುಸ್ಲಿಂ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ಕೃಷ್ಣ ಕೃಷ್ಣ ಎಂದು ಹೇಳಿಸಿ ಆಪರೇಶನ್‌ ಮಾಡಿದ್ದು, ಸದ್ಯ ವಿವಾದಕ್ಕೀಡಾಗಿದೆ.

ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಬೆಂಗಳೂರು ಮೂಲದ ನಿವಾಸಿ ನಾಸಿಮಾ ಬಾನು ಎಂಬ ಮಹಿಳೆ ತಮ್ಮ ಅಜ್ಜಿಯ ಮನೆಗೆಂದು ಹೋಗಿದ್ದರು. ಪ್ರತೀ ತಿಂಗಳು ಚಿಂತಾಮಣಿಯಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಯುತ್ತದೆ. ಆದ್ದರಿಂದ ನಾಸಿಮಾಬಾನು ಚಿಕಿತ್ಸೆ ಮಾಡಿಸಿಕೊಳ್ಳಲು ಹೋಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಶಸ್ತ್ರ ಚಿಕಿತ್ಸೆ ಮಾಡಲು ಬೆಂಗಳೂರಿನಿಂದ ರಾಮಕೃಷ್ಣ ಹೆಸರಿನ ವೈದ್ಯರು ಆಗಮಿಸಿದ್ದರು. ನಾಸಿಮಾ ಬಾನುಗೆ ಶಸ್ತ್ರ ಚಿಕಿತ್ಸೆ ಮಾಡುವ ಸಮಯದಲ್ಲಿ  ಅಲ್ಲಾ ಅಲ್ಲಾ ಎನ್ನುತ್ತಿದ್ದ ಅವರಿಗೆ ಅಲ್ಲಾ ಅಲ್ಲಾ ಎನ್ನಬೇಡ ಕೃಷ್ಣ ಕೃಷ್ಣ ಎಂದು ಹೇಳು ಎಂದಿದ್ದಾರೆ. ಅಲ್ಲದೆ ಆಕೆ ಅದಕ್ಕೆ ನಿರಾಕರಿಸಿದಾಗ ಕೃಷ್ಣನ ಹೆಸರು ಹೇಳದಿದ್ದರೆ ಚಿಕಿತ್ಸೆ ಮಾಡುವುದಿಲ್ಲ ಎಂದಿದ್ದು, ಒತ್ತಾಯ ಪೂರ್ವಕವಾಗಿ ಕೃಷ್ಣನ ಹೆಸರನ್ನು ಹೇಳಿಸಿದ್ದಾರೆ ಎಂದು ತಿಳಿದುಬಂದಿದೆ.

ಚಿಕಿತ್ಸೆ ಬಳಿಕ ನಾಸಿಮಾ ಬಾನು, ವೈದ್ಯ ರಾಮಕೃಷ್ಣ ವಿರುದ್ದ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಚಿಂತಾಮಣಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published.