ಎಲ್ಲದಕ್ಕೂ ಮುಸ್ಲೀಮರೇ ಕಾರಣ ಎಂದರೆ ಹೇಗೆ……? : BJP ವಿರುದ್ಧ CM ಸಿದ್ದರಾಮಯ್ಯ ಗುಡುಗು

ಬಳ್ಳಾರಿ : ರಾಹುಲ್ ಗಾಂಧಿ ಕಾಂಗ್ರೆಸ್‌ನ ನೂತನ ಅಧ್ಯಕ್ಷಯಾಗಿ ಆಯ್ಕೆಯಾಗಲಿದ್ದು, ಪಕ್ಷಕ್ಕೆ ಹೊಸ ಚೈತನ್ಯ ಹಾಗೂ ಉತ್ಸಾಹ ಬರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಪೈಪೋಟಿಯಿದೆ. ಜಿಎಸ್ ಟಿ, ನೋಟ್ ಬ್ಯಾನ್ ಕುರಿತು ಬಿಜೆಪಿ ವಿರುದ್ದ ಅಂಡರ್ ಕರೆಂಟ್ ಇದೆ. ಎರಡರಲ್ಲಿ ಯಾರಾದರೂ ಗೆಲ್ಲಬಹುದು ಎಂಬ ಮಾಹಿತಿಯಿದೆ. ಗುಜರಾತ್ ನಲ್ಲಿ ಕಾಂಗ್ರೆಸ್ ಗೆದ್ರೂ ಆಶ್ಚರ್ಯವಿಲ್ಲ ಎಂದಿದ್ದಾರೆ.

C M Siddaramaiah addressing during the Joint session at Vidhana Soudha in Bangalore on Thursday, January 23, 2014.

ಕರಾವಳಿ ಭಾಗದಲ್ಲಿ ಕೋಮುಗಲಭೆಗೆ ಬಿಜೆಪಿ ನಾಯಕರೇ ಕಾರಣ ಎಂದಿರುವ ಸಿಎಂ, ಇದಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕುಮ್ಮಕ್ಕು ನೀಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಬಿಜೆಪಿಯವರು ಹತಾಶರಾಗಿದ್ದಾರೆ. ಹೆಣದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಪೋಸ್ಟ್ ಮಾರ್ಟ್ ವರದಿ ಬರುವ ಮೊದಲೇ ನಿರ್ಧರಿಸಲು ಇವರಾರು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಎಲ್ಲದಕ್ಕೂ ಮುಸ್ಲೀಮರೇ ಕಾರಣ ಎಂದರೆ ಹೇಗೆ?. ವರದಿ ಬರಲಿ ತನಿಖೆ ಮುಗಿಯಲಿ ಆಮೇಲೆ ನೋಡೋಣ ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com