ಈಗ ನನ್ನ ಕಥೆ ಏನು ವಿರಾಟ್‌ ? ಕೊಹ್ಲಿ -ಅನುಷ್ಕಾ ಮದುವೆಗೆ ಬೇಸರ ವ್ಯಕ್ತಪಡಿಸಿದ್ರು ಈ ನಟಿ..?

ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ವಿಷಯ ತಿಳಿಯುತ್ತಿದ್ದಂತೆ ಅನೇಕ ಗಣ್ಯರು, ಬಾಲಿವುಡ್‌ ತಾರೆಗಳು ಇಬ್ಬರಿಗೂ ಶುಭ ಕೋರುತ್ತಿದ್ದಾರೆ. ಆದರೆ ಬಾಲಿವುಡ್‌ನ ನಟಿ ರಾಖಿ ಸಾವಂತ್‌ ಮಾತ್ರ ವಿರಾಟ್ ಅನುಷ್ಕಾ ಮದುವೆಯಾಗಿದ್ದಕ್ಕೆ ಮುಖ ಕೆಂಪು ಮಾಡಿಕೊಂಡಿದ್ದಾರೆ.

ಇಟಲಿಯಲ್ಲಿ ನಡೆದ ವಿರಾಟ್ ಅನುಷ್ಕಾ ಮದುವೆ ವಿಚಾರ ತಿಳಿಯುತ್ತಿದ್ದಂತೆ ನಟಿ ರಾಖಿ ಸಾವಂತ್‌ ಬೇಸರ ವ್ಯಕ್ತಪಡಿಸಿದ್ದಾರೆ.ಇನ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಅಪ್ ಲೋಡ್‌ ಮಾಡಿದ್ದು, ಈಗ ನನ್ನ ಕಥೆ ಏನು ವಿರಾಟ್‌ ?. ನಾನು ವಾಶ್‌ ರೂಮಿನಲ್ಲಿದ್ದಾಗ ನಿನ್ನ ಮದುವೆಯ ವಿಚಾರ ತಿಳಿಯಿತು. ಈಗ ನಾನೇನು ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ರಾಖಿ ಸಾವಂತ್‌ ಕೊಹ್ಲಿಯನ್ನು ಪ್ರೀತಿಸುತ್ತಿದ್ದು, ಕೊಹ್ಲಿ ಬಳಿ ತಮ್ಮ ಪ್ರೇಮ ನಿವೇದನೆ ಮಾಡಿದ್ದರು. ನನಗೆ ಕೊಹ್ಲಿ ಎಂದರೆ ಇಷ್ಟ. ಅನುಷ್ಕಾ ಇನ್ನೂ ಅವರಿಬ್ಬರ ಪ್ರೀತಿಯನ್ನು ಎಲ್ಲರೊಂದಿಗೆ ಒಪ್ಪಿಕೊಂಡಿಲ್ಲ. ಆದರೆ ನಾನು ಕೊಹ್ಲಿಯನ್ನು ಮನಸಾರೆ ಇಷ್ಟಪಡುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು.

ವಿರಾಟ್‌ ಹಾಗೂ ಅನುಷ್ಕಾ ರಿಸೆಪ್ಷನ್‌ ಡಿಸೆಂಬರ್‌ 21ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್‌ 26ರಂದು ಮುಂಬೈನಲ್ಲಿ ನಡೆಯಲಿದ್ದು, ಬಳಿಕ ಇಬ್ಬರೂ ದಕ್ಷಿಣ ಆಫ್ರಿಕಾಗೆ ತೆರಳಲಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com