ಮೊದಲನೆ ಪತ್ನಿ ಸಾಕಾಗಿತ್ತು, ಎರಡನೆಯವಳು ಬೇಕಾಗಿತ್ತು…ಮದುವೆಯಾದ ಈತ ಮಾಡಿದ್ದೇನು..?

ತುಮಕೂರು : ಮೊದಲ ಮದುವೆ ಆದ್ರು ಕೂಡಾ ಖಾಸಗಿ ಬಸ್ ಚಾಲಕನೋರ್ವ ಎಂ.ಎ. ಪಧವಿದರೆಯನ್ನ ಲವ್ ಮಾಡಿ, ಆಕೆಯನ್ನೂ ಮದುವೆ ಯಾಗಿ ಕೊನೆಗೆ ಆ ಯುವತಿಗೆ ಚಿತ್ರಹಿಂಸೆ ಕೊಟ್ಟು ಮನೆಯಿಂದ ಹೊರಹಾಕಿದ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.

ಚಿಕ್ಕನಾಯಕನಹಳ್ಳಿಯ ದೇವರಹಳ್ಳಿಯ ನಿವಾಸಿ ರಂಗನಾಥಸ್ವಾಮಿ, ಹಾಗೂ ಊರ್ಡಿಗೆರೆಯ ಯುವತಿ ಮಂಜುಳಾ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಂಜುಳಾ ಪದವಿ ವ್ಯಾಸಂಗ ಮಾಡುವಾಗ ಪಿಕ್ನಿಕ್ ಹೋದ ಬಸ್ ಚಾಲಕ ರಂಗನಾಥ ಮಂಜುಳಾಗೆ ಪ್ರಪೋಸ್ ಮಾಡಿದ್ದಾನೆ.
ರಂಗನಾಥ ಈಗಾಗಲೇ ತಾನು ಮದುವೆಯಾಗಿರುವ ಬಗ್ಗೆ ಮಂಜುಳಾಗೆ ತಿಳಿಸಿರಲಿಲ್ಲ. ಇಬ್ಬರೂ ಸಿನಿಮಾ, ಪಾರ್ಕ್ ಅಂತಾ ಸುತ್ತಿದ್ದಾರೆ. ಸಾಲದ್ದಕ್ಕೆ ಯುವತಿಯನ್ನು ಗರ್ಭವತಿಯನ್ನಾಗಿಸಿದ್ದಾನೆ. ಮದುವೆಯಾಗು ಅಂದಾಗ ರಂಗನಾಥನ ನಿಜ ಬಣ್ಣ ಬಯಲಾಗಿದೆ.

ಕೊನೆಗೆ ಪೊಲೀಸ್ ದೂರಿಗೆ ಹೆದರಿ ಮೊದಲ ಪತ್ನಿಯನ್ನು ಒಪ್ಪಿಸಿ ಮಂಜುಳಾಳೊಂದಿಗೆ ರಂಗನಾಥ ಎರಡನೇ ಮದುವೆಯಾಗಿದ್ದಾನೆ. ಮದುವೆಯಾದ ಮಾರನೆ ದಿನದಿಂದಲೇ ಮೊದಲ ಪತ್ನಿಯೊಂದಿಗೆ ಸೇರಿಕೊಂಡು, ಮಂಜುಳಾಗೆ ಚಿತ್ರಹಿಂಸೆ ಕೊಡಲು ಆರಂಭಿಸಿದ್ದಾನೆ. ಕಳೆದ 8 ತಿಂಗಳಿನಿಂದ ನಿರಂತರವಾಗಿ ಹಲ್ಲೆ ನಡೆಸುತ್ತಾ ಬಂದಿದ್ದಾರೆ. ಕಬ್ಬಿಣದ ರಾಡ್ ಕಾಯಿಸಿ ಮಂಜುಳಾ ದೇಹದ ಖಾಸಗಿ ಭಾಗಕ್ಕೆ ಬರೆ ಕೊಟ್ಟಿದ್ದಾರೆ. ಕೈ ಕಾಲು ಕಟ್ಟಿಹಾಕಿ ಕಾದ ಇಸ್ತ್ರಿಪೆಟ್ಟಿಗೆಯನ್ನು ಮರ್ಮಾಂಗಕ್ಕೆ ಇಟ್ಟು ಸುಟ್ಟಿದ್ದಾರೆ. ಲವ್ ಮ್ಯಾರೇಜ್ ಆದ ಕಾರಣ ಅತ್ತ ಮಂಜುಳಾ ತವರು ಮನೆಯವರೂ ಸೇರಿಸಿಕೊಳ್ಳುತಿಲ್ಲ. ಅಕ್ಷರಶಃ ಬೀದಿಗೆ ಬಂದಿರುವ ಮಂಜುಳಾ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.

Leave a Reply

Your email address will not be published.

Social Media Auto Publish Powered By : XYZScripts.com