ನಿಮ್ಮ Romance ಮಕ್ಕಳ ಮೇಲೆ ಪರಿಣಾಮ ಬೀರುತ್ತೆ ಎಂದ ಶಾಲೆ, ಶಿಕ್ಷಕ ದಂಪತಿಗೆ ಮಾಡಿದ್ದೇನು..?

ಶ್ರೀನಗರ : ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಶಿಕ್ಷಕ ದಂಪತಿಯನ್ನು ಮದುವೆಯ ದಿನವೇ ಕೆಲಸದಿಂದ ಅಮಾನತು ಮಾಡಿದ್ದು, ರೊಮ್ಯಾನ್ಸ್ ನಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಇವರಿಬ್ಬರನ್ನು ಅಮಾನತು ಮಾಡಿರುವುದಾಗಿ ಶಾಲಾ ಆಡಳಿತ ಮಂಡಳಿ ಸಮಜಾಯಿಷಿ ನೀಡಿದೆ.
ರಾತಿಕ್‌ ಬಟ್‌ ಹಾಗೂ ಸುಮಯ ಬಶೀರ್‌ ಎಂಬ ಶಿಕ್ಷಕರು ಅನೇಕ ವರ್ಷಗಳಿಂದ ಮುಸ್ಲಿಂ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಇಬ್ಬರು ಪ್ರೀತಿಸಿ ಮದುವೆಯಾಗಿದ್ದು, ಮದುವೆಯಾದ ದಿನವೇ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಈ ಕುರಿತು ಶಾಲೆಯ ಮುಖ್ಯಸ್ಥ ಬಶೀರ್‌ ಹೇಳಿಕೆ ನೀಡಿದ್ದು, ಶಿಕ್ಷಕರಿಬ್ಬರೂ ಮದುವೆಗೂ ಮುನ್ನ ಶಾಲೆಯಲ್ಲಿ ರೊಮ್ಯಾಂಟಿಕ್‌ ಆಗಿ ವರ್ತಿಸುತ್ತಿದ್ದರು. ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇವರಿಬ್ಬರನ್ನೂ ಕೆಲಸದಿಂದ ತೆಗೆದು ಹಾಕಿರುವುದಾಗಿ ಹೇಳಿದ್ದಾರೆ.
 ಆದರೆ ಈ ಕುರಿತು ದಂಪತಿ ಶಾಲೆಯ ಆಡಳಿತ ಮಂಡಳಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಮದುವೆಯನ್ನು ಹಿರಿಯರು ನಿಶ್ಚಯಿಸಿದ್ದು, ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಸಹ ನಡೆದಿತ್ತು. ನಮ್ಮ ಸಂಬಂಧ  ಈ ರೀತಿ ಇದೆ ಎಂದು ಮೊದಲೇ ಯಾಕೆ ಹೇಳಲಿಲ್ಲ. ಅಲ್ಲದೆ ಕೆಲಸದಿಂದ ತೆಗೆದು ಹಾಕುವ ಬಗ್ಗೆ ನಮಗೆ ಮೊದಲೇ ಯಾಕೆ ತಿಳಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com