ಧೋನಿ, ಗೇಲ್‌ರಷ್ಟು ಶಕ್ತಿ ನನಗಿಲ್ಲ ಎಂದ ರೋಹಿತ್‌ ಶರ್ಮಾ : ಹೀಗಂದಿದ್ಯಾಕೆ ?

ಮೊಹಾಲಿ :  ಮಹೇಂದ್ರ ಸಿಂಗ್ ಧೋನಿ, ಕ್ರಿಸ್‌ ಗೇಲ್ ಅವರಷ್ಟು ಬಲಶಾಲಿ ನಾನಲ್ಲ. ಆದ್ದರಿಂದ ಸಮಯ ನೋಡಿಕೊಂಡು ಆಟವಾಡುತ್ತೇನೆ ಎಂದು ಟೀಂ ಇಂಡಿಯಾದ ಬ್ಯಾಟ್ಸ್‌ ಮನ್‌ ರೋಹಿತ್‌ ಶರ್ಮಾ ಹೇಳಿದ್ದಾರೆ.
ಬುಧವಾರ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ದ ರೋಹಿತ್ ಶರ್ಮಾ 3ನೇ ದ್ವಿಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು. ಈ ಪಂದ್ಯದಲ್ಲಿ 208 ರನ್ ಗಳಿಸಿದ್ದ ರೋಹಿತ್‌ 12 ಸಿಕ್ಸ್, 13 ಬೌಂಡರಿಗಳನ್ನು ಸಿಡಿಸಿದ್ದರು.
ಬಳಿಕ ರವಿ ಶಾಸ್ತ್ರಿ ಅವರೊಂದಿಗೆ ವಿಡಿಯೊ ಮಾತುಕತೆ ನಡೆಸಿದ್ದ ರೋಹಿತ್‌ ಶರ್ಮಾ, ನಾನು ಧೋನಿ, ಕ್ರಿಸ್‌ ಗೇಲ್‌ ಅವರಲ್ಲಿ ಇರುವಷ್ಟು ಶಕ್ತಿ ನನ್ನಲ್ಲಿಲ್ಲ. ಆದ್ದರಿಂದ ಶಾಟ್‌ಗಳನ್ನು ಕೇವಲ ಟೈಮಿಂಗ್‌ ಮಾಡಬಲ್ಲೆ. ನಾನು 3ನೇ ದ್ವಿಶತಕ ಸಾಧಿಸಲು ಇದನ್ನೇ ಮಾಡಿದ್ದೇನೆ. ಎಸೆತೆಗಳನ್ನು ಟೈಮಿಂಗ್ ಮಾಡುವುದೇ ನನ್ನ ಶಕ್ತಿ ಎಂದಿದ್ದಾರೆ.
 ಇದೇ ವೇಳೆ ಸೂಕ್ತ ತರಬೇತಿ ನೀಡಿರುವ ಶಂಕರ್‌ ಬಸು ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಭಾರತ 141 ರನ್‌ಗಳ ಭರ್ಜರಿ ಗೆಲುವು ಸಾಧಿಸಿ, 3 ಪಂದ್ಯಗಳ ಒನ್‌ ಡೇ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿದ.

Leave a Reply

Your email address will not be published.

Social Media Auto Publish Powered By : XYZScripts.com