ರಾಹುಲ್‌ ಗಾಂಧಿಯನ್ನೇ ಹತ್ಯೆ ಮಾಡಿದ CM ಸಿದ್ದರಾಮಯ್ಯ …????!!!!

ಕುಷ್ಟಗಿ : ಮಾತನಾಡುವ ಭರದಲ್ಲಿ ಸಿಎಂ ಸಿದ್ದರಾಮಯ್ಯ ದೊಡ್ಡ ಯಡವಟ್ಟು ಮಾಡಿದ್ದಾರೆ. ರಾಜೀವ್‌ ಗಾಂಧಿ ಅವರ ಹತ್ಯೆ ಎನ್ನುವ ಬದಲು ರಾಹುಲ್ ಗಾಂಧಿಯವರ ಹತ್ಯೆ ಎಂದಿದ್ದು, ಕ್ಷಣಕಾಲ ಗೊಂದಲ ಉಂಟಾದ ಪ್ರಸಂಗ ನಡೆದಿದೆ.

ಕುಷ್ಟಗಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ, ರಾಹುಲ್‌ ಗಾಂಧಿ ಅವರ ಹತ್ಯೆಗೂ ಮುನ್ನ ಲೋಕಸಭಾ ಚುನಾವಣೆ ನಡೆದಿದ್ದರೆ ನಾನೇ ಗೆಲ್ಲುತ್ತಿದ್ದೆ ಎಂದು ಸಿಎಂ ಹೇಳಿದ್ದು, ಕಾರ್ಯಕರ್ತರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಕೂಡಲೆ ಎಚ್ಚೆತ್ತುಕೊಂಡ ಸಿಎಂ, ನಾನು ಸರಿಯಾಗೇ ಹೇಳುತ್ತಿದ್ದೆ ಎನ್ನುವ ಮೂಲಕ ಅದಕ್ಕೆ ಸಮರ್ಥನೆ ನೀಡಿದ್ದಾರೆ.

1991ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಾಗಿತ್ತು. ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಹ ವ್ಯಕ್ತವಾಗಿತ್ತು. ಆದರೆ ಹೊಸಪೇಟೆ ಭಾಗದಲ್ಲಿ ಕಡಿಮೆ ಮತ ಲಭಿಸಿದ್ದ ಕಾರಣ ಸೋಲುಣ್ಣಬೇಕಾಯಿತಪ. ಲೋಕಸಭೆ ಚುನಾವಣೆ ಗೆದ್ದಿದ್ದರೆ ಸಿಎಂ ಆಗುತ್ತಿರಲಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com