December 15 ರಿಂದ 17 : ಫ್ಲಿಪ್‌ ಕಾರ್ಟ್‌ನಲ್ಲಿ ಭರ್ಜರಿ ಆಫರ್‌….ಏನೇನಿದೆ ನೀವೇ ನೋಡಿ….

ಜನಪ್ರಿಯ ಆನ್‌ಲೈನ್‌ ಶಾಪಿಂಗ್ ತಾಣವಾದ ಫ್ಲಿಪ್‌ ಕಾರ್ಟ್‌ ಮೂರು ದಿನದ ಪಿಂಚ್‌ ಡೇಸ್ ಆಫರ್‌ ನೀಡುತ್ತಿದೆ. ಡಿಸೆಂಬರ್ 15ರಿಂದ 17ರವರೆಗೆ ಮೂರು ದಿನಗಳ ಈ ಭರ್ಜರಿ ಆಫರ್‌ನಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳ ಮೇಲೆ ಭಾರೀ ಡಿಸ್ಕೌಂಟ್‌ ನೀಡಿದೆ.

ಮೊಬೈಲ್ ಬಿಡಿ ಭಾಗಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಪವರ್‌ ಬ್ಯಾಂಕ್‌ , ಟಿವಿ, ಗೃಹೋಪಯೋಗಿ ವಸ್ತುಗಳ ಮೇಲೆ ಶೇ80ರಷ್ಟು ಆಫರ್‌ ನೀಡಿದೆ. ಅಷ್ಟೇ ಅಲ್ಲದೆ,ಎಚ್‌.ಡಿ ಎಫ್‌.ಸಿ ಬ್ಯಾಂಕ್‌ ಡೆಬಿಟ್ ಹಾಗೂ ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಶೇ 10ರಷ್ಟು ರಿಯಾಯಿತಿಯನ್ನೂ ನೀಡಿದೆ.

ಇದರ ಜೊತೆಗೆ ಹಳೆಯ ವಸ್ತುಗಳ ಮೇಲೆ ಎಕ್ಸ್‌ಚೇಂಜ್‌ ಆಫರ್ರನ್ನೂ ನೀಡಿದ್ದು, ಸ್ಯಾಮ್ಸಂಗ್ ಗ್ಯಾಲಕ್ಸಿ  ಆನ್ ್ನೆಸ್ಟ್‌ ಫೋನನ್ನು ಆಫರ್‌ ಆಫ್‌ ದಿ ಇಯರ್‌ ಎಂದು ಫ್ಲಿಪ್‌ಕಾರ್ಟ್‌ ಘೋಷಿಸಿದೆ. ಜೊತೆಗೆ ಎಐಎ1, ವೀವೋ, ಐಫೋನ್‌ 10, ಗೂಗಲ್‌ ಪಿಕ್ಸೆಲ್‌ಗಳ ಮೇಲೆ ಸಹ ರಿಯಾಯಿತಿ ನೀಡಿದೆ.

ಈ ಬಾರಿಯ ಆಫರ್‌ನಲ್ಲಿ ಭಾರೀ ರಿಯಾಯಿತಿ ಘೋಷಿಸಿದ್ದು, ಕ್ರಿಸ್‌ಮಸ್‌ ಹಾಗೂ ನ್ಯೂಯಿಯರ್‌ಗೆ ಕಡಿಮೆ ಬೆಲೆಯಲ್ಲಿ ಗಿಪ್ಟ್ ನೀಡಲು ಸದವಕಾಶ ಇದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com