ನಿರ್ಭಯಾ ಮಾದರಿಯಲ್ಲೇ ಜಿಶಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗೆ ಗಲ್ಲು ಶಿಕ್ಷೆ

ದೆಹಲಿ : ಯುವತಿ ಜಿಶಾಳ ಮೇಲೆ ಅತ್ಯಾಚಾರವೆಸಗಿ, ನಿರ್ಭಯಾ ಮಾದರಿಯಲ್ಲೇ ಬರ್ಬರವಾಗಿ ಹತ್ಯೆ ಮಾಡಿದ್ದ ಪಾತಕಿ ಅಮೀರುಲ್ಲಾ ಇಸ್ಲಾಂಗೆ ಕೇರಳದ ಎರ್ನಾಕುಲಂ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.

2016ರ ಏಪ್ರಿಲ್‌ 8ರಂದು ಪೆರಂಬೂರ್‌ನಲ್ಲಿ ಜಿಶಾ ಎಂಬ ಕಾನೂನು ವಿದ್ಯಾರ್ಥಿನಿಯ ಮೇಲೆ ಅಮೀರುಲ್ಲಾ ಅತ್ಯಾಚಾರವೆಸಗಿ, ಆಕೆಯ ಖಾಸಗಿ ಭಾಗವನ್ನು ಕತ್ತರಿಸಿ ಹಾಕಿದ್ದ. ತನಿಖೆ ವೇಳೆ ಮತ್ತೊಬ್ಬ ವಲಸೆ ಕಾರ್ಮಿಕ ಅನಾರುಲ್ಲಾ ಎಂಬಾತ ಇದಕ್ಕೆ ಪ್ರಚೋದಿಸಿದ್ದ ಎಂದು ಅಮೀರುಲ್ಲಾ ಬಾಯಿಬಿಟ್ಟಿದ್ದ. ಆದರೆ ಅನಾರುಲ್ಲಾ ಕೃತ್ಯ ನಡೆಯುವ ಮುಂಚೆಯೇ ಊರು ಬಿಟ್ಟಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.

85 ದಿನಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ್ದು, 100ಕ್ಕೂ ಹೆಚ್ಚು ಮಂದಿ ಸಾಕ್ಷಿದಾರರ ವಿಚಾರಣೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಸರಿಯಾದ ಸಾಕ್ಷಿಗಳಿಲ್ಲದಿದ್ದರೂ ಜಿಶಾ ಮನೆಯಿಂದ ಅಮೀರುಲ್ಲಾ ಹೊರಬಂದಿದ್ದನ್ನು ನೆರೆಯ ವ್ಯಕ್ತಿಯೊಬ್ಬ ನೋಡಿದ್ದ. ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ 30ಕಕೂ ಹೆಚ್ಚು ಮಂದಿ ಶಂಕಿತರ ವಿಚಾರಣೆ ನಡೆಸಿತ್ತು. ಅಲ್ಲದೆ 20 ಲಕ್ಷ ಕರೆಗಳ ದಾಖಲೆಗಳನ್ನು ಪರಿಶೀಲಿಸಿ ಅಮೀರುಲ್ಲಾನನ್ನು ಅಪರಾಧಿ ಎಂದು ಸಾಬೀತು ಮಾಡಿದ್ದು, ಈಗ ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com