ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರ : ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದ CM

ಕುಷ್ಟಗಿ : ಲಿಂಗಾಯಿತ ಪ್ರತ್ಯೇಕ ಧರ್ಮ ಸ್ಥಾಪನೆಗಾಗಿ ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲೇ ಶಿಫಾರಸ್ಸು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕುಷ್ಟಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಶೈವ ಹಾಗೂ ಲಿಂಗಾಯಿತರು ಒಂದಾಗಿ ಬರುವುದಕ್ಕೆ ಹೇಳಲಾಗಿತ್ತು. ಆದರೆ ಸುಮಾರು ಮೂರು ತಿಂಗಳು ಕಳೆದರೂ ಒಟ್ಟಿಗೆ ಬರಲಿಲ್ಲ. ಆದ್ದರಿಂದ ಈಗಾಗಲೇ ಬಂದಿರುವ ಮನವಿ ಆಧರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ.

ಇಂದಿರಾಗಾಂಧಿ ಜೈಲಿಗೆ ಹೋಗಿದ್ದು ಹಾಗೂ ಯಡಿಯೂರಪ್ಪ ಜೈಲಿಗೆ ಹೋಗಿದ್ದು ಬೇರೆ ಬೇರೆ. ಇಂದಿರಾಗಾಂಧಿ ಲಂಚ ತೆಗೆದುಕೊಂಡು ಜೈಲಿಗೆ ಹೋಗಿಲ್ಲ. ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿದ್ದಾರೆ. ಇವರಿಗೇನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಕರಾವಳಿ ಭಾಗ ಶಾಂತವಾಗಿದೆ. ಇಂದು ಯಾವುದೇ ಗಲಭೆ ನಡೆದಿಲ್ಲ. ಬಿಜೆಪಿಯವರು ಕೋಮು ಗಲಭೆ ಮೂಲಕ ಮತದಾರರನ್ನು ಧ್ರುವೀಕರಣ ಮಾಡುವ ಹುನ್ನಾರ ನಡೆಸಿದ್ದಾರೆ. ಪರೇಶ ಸಾವಿನ ಮರಣೋತ್ತರ ಪರೀಕ್ಷೆ ವರದಿ ಬಂದಿಲ್ಲ. ಪ್ರಕರಣ ತನಿಖೆ ಸಿಬಿಐಗೆ ವಹಿಸುವಂತೆ ಕುಟುಂಬದ ಸದಸ್ಯರು ಕೇಳಿದ ಹಿನ್ನೆಲೆಯಲ್ಲಿ ಸಿಬಿಐಗೆ ವಹಿಸಿದೆ.

ಯಡಿಯೂರಪ್ಪ ಬುಟ್ಟಿಯೊಳಗೆ ಹಾವೇ ಇಲ್ಲ. ಬರೀ ಬಿಡ್ತೀನಿ ಅಂತ ಹೇಳುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲೂ ಹೀಗೆ ಹೇಳಿದ್ದರು. ಆದರೆ ಬುಟ್ಟಿಯೊಳಗೆ ಹಾವು ಇರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published.