ಗುಜರಾತ್‌ ಚುನಾವಣಾ ಸಮರ : ಮತಗಟ್ಟೆ ಸಮೀಕ್ಷೆಯಲ್ಲಿ BJP ಗೆ ಗೆಲುವು

ದೆಹಲಿ : ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಪ್ರಧಾನಿ ಮೋದಿ ಅವರ ತವರೂರು ಗುಜರಾತ್‌ ವಿಧಾನ ಸಭಾ ಚುನಾವಣೆ ಮುಗಿದಿದ್ದು, ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ.

ಡಿಸೆಂಬರ್‌ 9ರಂದು 89 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿತ್ತು. ಬಳಿಕ ಇಂದು 93 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದು ತಿಳಿದುಬಂದಿದೆ.

ಸಿ ವೋಟರ್‌ ಸಮೀಕ್ಷೆಯ ಪ್ರಕಾರ, ಗುಜರಾತ್‌ನ ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿಗೆ 109 ಸ್ಥಾನ, ಕಾಂಗ್ರೆಸ್‌ಗೆ 70 ಸ್ಥಾನ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು 3 ಸ್ಥಾನಗಳನ್ನು ಪಡೆಯುವುದಾಗಿ ಹೇಳಲಾಗಿದೆ. ಜೊತೆಗೆ 68 ವಿಧಾನ ಸಭಾ ಸದಸ್ಯ ಬಲವಿರುವ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 68 ಸ್ಥಾನಗಳಲ್ಲೂ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್‌ ನೆಲಕಚ್ಚಲಿದೆ ಎಂದು ಸಮೀಕ್ಷೆ ಹೇಳಿದೆ.

ಗುಜರಾತ್‌

ವಾಹಿನಿಗಳು                              ಬಿಜೆಪಿ                    ಕಾಂಗ್ರೆಸ್‌               ಇತರೆ
ಸಿಎನ್‌ಎನ್‌-ಐಬಿನ್‌                    109                       69                         4
ಎನ್‌ಡಿಟಿವಿ                                109                       70                          3

ಟೈಮ್ಸ್ ನೌ                                109                       70                         3

ರಿಪಬ್ಲಿಕ್‌                                    115                         65                         0

ನ್ಯೂಸ್‌ ಎಕ್ಸ್‌                              110-120               65-75                    2-4

ಸ್ವರಾಜ್‌ ಇಂಡಿಯಾ                     65                        113                         4

ಇಂಡಿಯಾ ಟುಡೆ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 51 ಸ್ಥಾನ ಗಳಿಸಲಿದ್ದು, ಕಾಂಗ್ರೆಸ್‌ ಕೇವಲ 17 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ ಎಂದಿದೆ. ಎಬಿಪಿ ನ್ಯೂಸ್‌ ಪ್ರಕಾರ ಬಿಜೆಪಿ 47ರಿಂದ 55 ಸ್ಥಾನ ಗಳಿಸಲಿದ್ದು, ಕಾಂಗ್ರೆಸ್‌ 13ರಿಂದ 20 ಸ್ಥಾನ ಗೆಲ್ಲಲಿದೆ ಎಂದು ಹೇಳಲಾಗಿದೆ.

ಭಾರೀ ಕುತೂಹಲ ಕೆರಳಿಸಿದ್ದ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಮುಗಿದಿದ್ದು, ಎರಡೂ ಪ್ರದೇಶಗಳಲ್ಲಿ ಬಿಜೆಪಿ ಜಯಭೇರಿ ಭಾರಿಸುವುದು ಖಚಿತವಾದಂತಾಗಿದೆ. ಆದರೆ ಫಲಿತಾಂಶ ಹೊರಬರುವವರೆಗೂ ಕಾಯಲೇ ಬೇಕು. ಗುಜರಾತ್‌ನಲ್ಲಿ ಎಲ್ಲಾ ಸಮೀಕ್ಷೆಗಳ ಪ್ರಕಾರ ಬಿಜೆಪಿ ಗೆಲ್ಲುತ್ತಾ, ಕಾಂಗ್ರೆಸ್‌ ಸೋಲುತ್ತದಾ ಎಂಬುದನ್ನು ಡಿಸೆಂಬರ್‌ 18ರವರೆಗೆ ಕಾದುನೋಡಬೇಕಿದೆ.

 

 

 

 

 

 

Leave a Reply

Your email address will not be published.

Social Media Auto Publish Powered By : XYZScripts.com