ಕಾಂಗ್ರೆಸ್‌ ದರೋಡೆಕೋರರು, ಕೊಲೆಗಡುಕರ ಪಕ್ಷ : ಹೀಗಂದಿದ್ದು ಯಾರು…?

ಬೆಳಗಾವಿ : ಕಾಂಗ್ರೆಸ್ ಪಕ್ಷ ದರೋಡೆಕೋರರು, ಕೊಲೆಗಡುಕರಪಕ್ಷ ಎಂದು ಬೆಳಗಾವಿಯಲ್ಲಿ ಸಂಸದ ಸುರೇಶ ಅಂಗಡಿ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಸುರೇಶ ಅಂಗಡಿ, ಹೊನ್ನಾವರದಲ್ಲಿ ನಡೆದ ಪರೇಶ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಸ್ವಾಗತಾರ್ಹವಾಗಿದೆ. ಬೆಂಕಿ ಹಚ್ಚೋ ಪಾರ್ಟಿ ಬಿಜೆಪಿ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.  ಆದರೆ ನಿಜವಾಗಿಯೂ ದರೋಡೆ, ಕೊಲೆ ಮಾಡೋ ಪಕ್ಷ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ್ರು. ಹುಬ್ಬಳ್ಳಿಯ ಎಸಿಪಿ ದಾವೂದ್ ಖಾನ್ ಬೆಳಗಾವಿಗೆ ವರ್ಗಾವಣೆ ಮಾಡಿದ್ದು, ಇದು ಖಂಡನೀಯ. ತಕ್ಷಣವೇ ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

 

Leave a Reply

Your email address will not be published.