WATCH : ಟಿವಿ ನಿರೂಪಕನ ವಿರುದ್ಧ ಲಂಚದ ಆರೋಪ : ಹೊಸ ಬಾಂಬ್‌ ಸಿಡಿಸಿದ HDK

ಬೆಂಗಳೂರು : ಜೆಡಿಎಸ್‌ ಪಕ್ಷದ ನಾಯಕರೊಬ್ಬರ ಬಳಿ ಖಾಸಗಿ ವಾಹಿನಿಯ ನಿರೂಪಕರೊಬ್ಬರು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು, ಇಲ್ಲವಾದಲ್ಲಿ ಮುಂದಿನ ವರ್ಷ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುತ್ತೇನೆ ಎಂದಿದ್ದರು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.
ಜೆಡಿಎಸ್‌ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಚ್‌ಡಿಕೆ, ಖಾಸಗಿ ವಾಹಿನಿಯ ನಿರೂಪಕರು ನಮ್ಮ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು . ಈ ಬಗ್ಗೆ ಸದ್ಯದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡುತ್ತಿದ್ದರು. ಈ ವೇಳೆ ನನ್ನ ಬಳಿ ಅವರ ಪ್ರತಿನಿಧಿಯೊಬ್ಬರು ಬಂದು ಪ್ರತಿಕ್ರಿಯೆ ಕೇಳಿದರು. ಮಾತನಾಡಲು ಮುಂದಾದಾಗ ಆಗಲೇ ಬಿಜೆಪಿ ಹಾಗೂ ಕಾಂಗ್ರೆಸ್ನವರು ಲೈನ್‌ನಲ್ಲಿದ್ದರು. ಜೆಡಿಎಸ್‌ ವತಿಯಿಂದ ರಮೇಶ್‌ ಬಾಬು ಮಾತನಾಡುತ್ತಿದ್ದರು. ಮಾತು ಪ್ರಾರಂಭವಾದಾಗ ನೀವು ಸಿಎಂ ಆಗಿದ್ದಾಗ 150 ಕೋಟಿ ರೂ ಪಡೆದಿದ್ದೀರಿ , ಇದನ್ನು ಚೆನ್ನಿಗಪ್ಪ ಹೇಳಿದ್ದಾರೆ ಎಂದು ಒಬ್ಬರು ಹೇಳಿದರು. ಕಾರ್ಯಕ್ರಮಕ್ಕೂ ಇದಕ್ಕೂ ಸಂಬಂಧವಿಲ್ಲ  ಎಂದು ನನಗೆ ಸಿಟ್ಟು ಬಂದು ಮೈಕ್‌ ತೆಗೆದುಹಾಕಿದೆ. ನಾನು ಗ್ರಾಮೀಣ ಪ್ರದೇಶದವನಾಗಿದ್ದರಿಂದ ಕೆಲ ಪದಗಳನ್ನು ಬಳಸಿದೆ. ಆದರೆ ಆಫ್‌ ದಿ ರೆಕಾರ್ಡ್‌ ಆದ ಸನ್ನಿವೇಶ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದಾಗ ನನಗೆ ಗೊತ್ತಾಗಲಿಲ್ಲ ಸರಿ ಮಾಡುತ್ತೇವೆ ಎಂಬ ಉತ್ತರ ಅವರಿಂದ ಬಂತು. ಎಚ್‌ಡಿಕೆಯಿಂದ ಅಶ್ಲೀಲ ಪದ ಬಳಕೆ ಎಂದು ಸುದ್ದಿ ಹಬ್ಬಿಸುವುದು ಸರಿಯಲ್ಲ. ಘನತೆಯನ್ನು ಗಳಿಸುವುದು ಕಷ್ಟ. ಆದರೆ ಹಾಳು ಮಾಡುವುದು ಸುಲಭ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com