ಕಮಲದ ಭದ್ರಕೋಟೆಗೆ congress ಲಗ್ಗೆ : ಧೂಳೀಪಟವಾಗುತ್ತಾ BJP : ವಿಶ್ಲೇಷಕರ ವಾದ ಏನು?

ಆಮ್ ಆದ್ಮಿ ಪಕ್ಷದ ಉಚ್ಛಾಟಿತ ನಾಯಕ ಯೋಗೇಂದ್ರ ಯಾದವ್‌ ಗುಜರಾತ್‌ ಚುನಾವಣೆ ಕುರಿತು ಭವಿಷ್ಯ ನುಡಿದಿದ್ದಾರೆ.  2017ರ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಸೋಲುವುದಾಗಿ ಹೇಳಿದ್ದು, ಕಾಂಗ್ರೆಸ್‌ ಗೆಲುವಿನ ನಗೆ ಬೀರಲಿದೆಯಂತೆ.

ಯೋಗೇಂದ್ರ ಯಾದವ್‌ ಈ ಹಿಂದೆ ಆಮ್ ಆದ್ಮಿ ಪಕ್ಷದಲ್ಲಿದ್ದರು. ಕಾರಣಾಂತರಗಳಿಂದ ಇವರನ್ನ ಆಪ್‌ನಿಂದ ಉಚ್ಛಾಟಸಲಾಗಿತ್ತು. ಸದ್ಯ ಇವರು ಸ್ವರಾಜ್‌ ಇಂಡಿಯಾ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಇವರು ಅತ್ಯುತ್ತಮ ರಾಜಕೀಯ ವಿಶ್ಲೇಷಕರಾಗಿದ್ದು, ಗುಜರಾತ್‌ ಚುನಾವಣೆ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಅಲ್ಲದೆ ಸೈಂಟಿಫಿಕ್‌ ವಿಧಾನದಲ್ಲೂ ಲೆಕ್ಕಾಚಾರ ಹಾಕಿ ಈ ವರದಿಯನ್ನು ಪ್ರಸ್ತುತ ಪಡಿಸಿದ್ದಾರೆ.

ವರದಿಯ ಪ್ರಕಾರ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಶೇ.43ರಷ್ಟು ಅಂದರೆ 86 ಸ್ಥಾನದಲ್ಲಿ ಗೆಲ್ಲಲಿದ್ದು, ಸ್ವಾತಂತ್ರ್ಯ ಅಭ್ಯರ್ಥಿಗಳಿಗೆ ಶೇ.43ರಷ್ಟು ಮತ ಬೀಳಲಿದೆ. ಅಂದರೆ ಬಿಜೆಪಿಗಿಂತ ಹೆಚ್ಚು 92 ಸ್ಥಾನ ಸಿಗಲಿದೆ.

ಇಲ್ಲವೇ ಬಿಜೆಪಿಗೆ ಶೇ.41ರಷ್ಟು ಮತ ಅಂದರೆ 65 ಸ್ಥಾನ ಲಭ್ಯವಾಗಲಿದ್ದು, ಸ್ವಾತಂತ್ರ್ಯ ಅಭ್ಯರ್ಥಿಗೆ 113 ಸ್ಥಾನ ಸಿಗಲಿದೆ. ಇಲ್ಲವೇ ಬಿಜೆಪಿ ಗುಜರಾತ್‌ನಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ.

ರಾಜಕೀಯ ವಿಶ್ಲೇಷಣೆ ಮಾಡುವುದರಲ್ಲಿ ಪ್ರಸಿದ್ದಿ ಪಡೆದಿರುವ ಯೋಗೇಂದ್ರ ಯಾದವ್‌ ಅವರ ಭವಿಷ್ಯದ ಕುರಿತು ಈಗಾಗಲೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ಪ್ರಾರಂಭವಾಗಿದ್ದು, ಗುಜರಾತ್‌ ಚುನಾವಣೆ ಫಲಿತಾಂಶ ಬಂದ ಬಳಿಕವೇ ಯೋಗೇಂದ್ರ ಯಾದವ್‌ ಅವರ ಭವಿಷ್ಯ ಸತ್ಯವಾಗುತ್ತದೋ ಅಥವಾ ಸುಳ್ಳಾಗುತ್ತದೋ ಎಂಬುದು ತಿಳಿಯಲಿದೆ.

Leave a Reply

Your email address will not be published.