ಸಾಲಬಾಧೆ : ಮೋದಿ ಜೊತೆ ಚಾಯ್‌ ಪೆ ಚರ್ಚಾ ನಡೆಸಿದ್ದ ರೈತ ಸಾವಿಗೆ ಶರಣು

ನಾಗ್ಪುರ : ಪ್ರಧಾನಿ ಮೋದಿ ಅವರ ಜೊತೆ ಚಾಯ್‌ ಪೆ ಚರ್ಚಾ ನಡೆಸಿದ್ದ ರೈತ ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದು, ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟಾಗಿದೆ.

ಮೂಲಗಳ ಪ್ರಕಾರ, ಮೋದಿ ಜೊತೆ ಚಾಯ್‌ ಪೆ ಚರ್ಚಾ ನಡೆಸಿದ್ ತೆಹ್ಸಿಲ್‌ ಅರ್ನಿ ಗ್ರಾಮದ ಕೈಲಾಸ್‌ ಕಿಸನ್‌ ಮಂಕರ್ (27) ಆತ್ಮಹತ್ಯೆಗೆ ಶರಣಾದ ಯುವಕ ಎಂದು ತಿಳಿದುಬಂದಿದೆ. ಈತ 3 ಎಕರೆ ಜಮೀನು ಹೊಂದಿದ್ದ. ತಂದೆಯ ಸಾವಿನ ಬಳಿಕ ಕೈಲಾಸ್‌ ತನ್ನ ಕುಟುಂಬದ ನಿರ್ವಹಣೆ ಮಾಡಬೇಕಾಗಿತ್ತು. ಅಲ್ಲದೆ ಸರಿಯಾದ ಮಳೆಯಾಗದೆ ಬೆಳೆ ಸಹ ಕೈ ಸೇರದೆ ಇದ್ದ ಕಾರಣ, ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

2014ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿ ತೆಹ್ಸಿಲ್‌ ಅರ್ನಿ ಗ್ರಾಮದಲ್ಲಿ ಚಾಯ್‌ ಪೆ ಚರ್ಚಾ ನಡೆಸಿದ್ದರು. ಈ ವೇಳೆ ರೈತರಿಗಾಗಿ ವಿವಿದ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದ್ದರು. ಅಲ್ಲದೆ ಈ ಗ್ರಾಮದಲ್ಲಿ ಸಾಲಬಾಧೆಯಿಂದಾಗಿ ಹೆಚ್ಚಿನ ರೈತರು ಸಾವಿಗೀಡಾಗಿದ್ದ ಕಾರಣ ಈ ಗ್ರಾಮವನ್ನೇ ಚಾಯ್‌ ಪೆ ಚರ್ಚಾ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಕಾರ್ಯಕ್ರಮ ನಡೆದ ದಿನದಿಂದ ಇಂದಿನವರೆಗೂ ಅಲ್ಲಿ 17 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com