ಅಮ್ಮನ ಅನೈತಿಕ ಸಂಬಂಧವನ್ನ ಸಹಿಸದ ಮಗಳು ಮಾಡಿದ್ದೇನು….ನೋಡಿ…?

ಹೈದರಾಬಾದ್‌ : ಆಗಾಗ್ಗೆ ಮನೆಗೆ ಬರುತ್ತಿದ್ದ ತಾಯಿಯ ಪ್ರಿಯತಮನನ್ನು ಮಗಳೇ ತನ್ನ ಸ್ನೇಹಿತರ ಸಹಾಯದಿಂದ ಹತ್ಯೆ ಮಾಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಎಲ್ಲಾ ವಿಷಯ ಬಹಿರಂಗಗೊಂಡಿದೆ.

ರಿಯಲ್‌ ಎಸ್ಟೇಟ್ ಉದ್ಯಮಿ ದುರ್ಗಾ ದಾಸ್‌ ಅವರ ಮೇಲೆ ಅಪರಿಚಿತರು ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ದುರ್ಗಾದಾಸ್ ಸಾವಿಗೀಡಾಗಿದ್ದರು.

ದುರ್ದಾದಾಸ್ ಅವರ ಪತ್ನಿ ಅರುಣಾವತಿ ಅವರು ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುವ ವೇಳೆ ದುಷ್ಕರ್ಮಿಗಳು ಇನ್ನೋವಾ ಕಾರಿನಲ್ಲಿ ಆಗಮಿಸಿದ್ದನ್ನು ಪತ್ತೆ ಹಚ್ಚಿದ್ದರು. ಈ ಕಾರಿನ ನಂಬರ್‌ ನಿಂದಾಗ ಆರೋಪಿಗಳು ಪತ್ತೆಯಾಗಿದ್ದಾರೆ.

ಆರೋಪಿಗಳ ವಿಚಾರಣೆ ವೇಳೆ ದುರ್ಗಾದಾಸ್ ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು , ತಾಯಿಯ ಪ್ರಿಯತಮನನ್ನು ಸಹಿಸದ ಮಗಳು ಶ್ರೀಜಾ ದಾಸ್‌ನನ್ನು ಕೊಲೆ ಮಾಡಿಸಿದ್ದಾಗಿ ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com