WATCH : ರೋಹಿತ್ ಡಬಲ್ ಸೆಂಚುರಿ ಸಂಭ್ರಮ : ಪತ್ನಿ ರಿತಿಕಾ ಕಣ್ಣೀರು ಹಾಕಿದ್ದೇಕೆ..?

ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅಮೋಘ ದ್ವಿಶತಕ ಬಾರಿಸಿದ್ದಾರೆ. ಮೈದಾನದಲ್ಲಿ ರೋಹಿತ್ ಬ್ಯಾಟ್ ಎತ್ತಿ ಸಂಭ್ರಮಿಸುತ್ತಿರುವಾಗ, ಪತ್ನಿ ರಿತಿಕಾ ಭಾವುಕರಾಗಿ ಕಣ್ಣೀರು ಹಾಕಿದರು. ಪತಿ ದ್ವಿಶತಕ ಬಾರಿಸಿದ ಖುಷಿಯಿಂದ ಸುರಿಸಿದ ಸಂತೋಷದ ಕಣ್ಣೀರಷ್ಟೇ ಅಲ್ಲ. ಇದಕ್ಕೆ ಇನ್ನೊಂದು ಹಿನ್ನೆಲೆಯೂ ಇದೆ.

ರೋಹಿತ್ ಶರ್ಮಾ ಹಾಗೂ ರಿತಿಕಾ ಸಜದೇಹ್ ಇಂದು 2ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಕೊಳ್ಳುತ್ತಿದ್ದಾರೆ. ರೋಹಿತ್ – ರಿತಿಕಾ 2015 ಡಿಸೆಂಬರ್ 15 ರಂದು ಮದುವೆಯಾಗಿದ್ದರು.

ಮೊಹಾಲಿಯಲ್ಲಿ ದ್ವಿಶತಕ ಬಾರಿಸಿದ ನಂತರ ರೋಹಿತ್ ಶರ್ಮಾ ಉಂಗುರದ ಬೆರಳಿಗೆ ಮುತ್ತಿಟ್ಟು ಗ್ಯಾಲರಿಯಲ್ಲಿ ಕುಳಿತಿದ್ದ ಪತ್ನಿ ರಿತಿಕಾ ಕಡೆಗೆ ಸನ್ನೆ ಮಾಡಿದರು. ಇದರಿಂದ ಭಾವುಕರಾದ ರಿತಿಕಾ ಕಣ್ಣಲ್ಲಿ ನೀರು ಮಿಂಚಿತು. ಈ ಮೂಲಕ ರೋಹಿತ್ ತಮ್ಮ ಎರಡನೇ ಮದುವೆ ವಾರ್ಷಿಕೋತ್ಸವದ ದಿನ ಪತ್ನಿ ರಿತಿಕಾಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com