WATCH : ‘ ಪಾಂಡ್ಯ vs ಧೋನಿ ‘ ರನ್ನಿಂಗ್ ರೇಸ್ : ಯಾರು ಗೆದ್ರು ನೀವೇ ನೋಡಿ..!

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ಅತ್ಯಂತ ಫಿಟ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುತ್ತಾರೆ. ಬ್ಯಾಟಿಂಗ್ ಮಾಡುವ ವೇಳೆಯಲ್ಲಿ ವಿಕೆಟ್ ಮಧ್ಯ ವೇಗವಾಗಿ ಓಡಿ ಸಿಂಗಲ್ ರನ್ ಗಳಿಸುವದಕ್ಕೆ ಮಾಹಿ ಹೆಸರುವಾಸಿ. ಮೈದಾನದಲ್ಲಿ ಯಾವಾಗಲೂ ಅತ್ಯಂತ ಚುರುಕಾಗಿರುವ ಧೋನಿ ವಿಕೆಟ್ ಕೀಪಿಂಗ್ ನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ 2ನೇ ಪಂದ್ಯದ ಆರಂಭಕ್ಕೂ ಮುನ್ನ ವಾರ್ಮ್ ಅಪ್ ಮಾಡುವ ಸಮಯದಲ್ಲಿ ಧೋನಿ ತಾವು ಎಷ್ಟು ಫಿಟ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.  36 ವರ್ಷ ವಯಸ್ಸಿನ ಧೋನಿ 24 ವರ್ಷದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ರನ್ನಿಂಗ್ ರೇಸ್ ಗಿಳಿದಿದ್ದಾರೆ. ಪಾಂಡ್ಯ ಅವರಿಗಿಂತ 12 ವರ್ಷ ದೊಡ್ಡವರಾದ ಧೋನಿ, ಹಾರ್ದಿಕ್ ಅವರನ್ನು ರನ್ನಿಂಗ್ ರೇಸ್ ನಲ್ಲಿ ಹಿಂದಿಕ್ಕಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com