ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ : ಮುನಿಸು ಮರೆತು ಕೈ ಕುಲುಕಿದ ಹಾಲಿ – ಮಾಜಿ ಪ್ರಧಾನಿಗಳು

ದೆಹಲಿ : ಸಂಸತ್‌ ಮೇಲೆ ಉಗ್ರ ದಾಳಿ ನಡೆದು ಇಂದಿಗೆ 16 ವರ್ಷವಾಗಿದ್ದು, ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಮಯದಲ್ಲಿ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಭೇಟಿಯಾಗಿದ್ದು ಕೈಕುಲುಕಿ ಕುಸಲೋಪರಿ ವಿಚಾರಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ಗುಜರಾತ್‌ ಚುನಾವಣೆಯ ಪ್ರಚಾರ ಮಾಡುವ ವೇಳೆ ಪ್ರಧಾನಿ ಮೋದಿ ಮನಮೋಹನ್‌ ಸಿಂಗ್‌ ವಿರುದ್ದ ಕಿಡಿಕಾರಿದ್ದು, ಗುಜರಾತ್‌ ಚುನಾವಣೆ ಸಂಬಂಧ ಕಾಂಗ್ರೆಸ್‌ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿತ್ತು. ಈ ವೇಳೆ ಮನಮೋಹನ್‌ ಸಿಂಗ್‌ ಸಹ ಭಾಗಿಯಾಗಿದ್ದರು ಎಂದು ಆರೋಪಿಸಿದ್ದರು.
ಈ ಆರೋಪಕ್ಕೆ ಮನಮೋಹನ್‌ ಸಿಂಗ್‌ ಪ್ರತಿಕ್ರಿಯಿಸಿದ್ದು, ಮಣಿಶಂಕರ್ ಅಯ್ಯರ ಅವರ ಮನೆಯಲ್ಲಿ ನಡೆದ ಭೋಜನ ಕೂಟದಲ್ಲಿ ಭಾಗಿಯಾಗಿದ್ದನ್ನೇ ಮೋದಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ದೇಶದ ಪ್ರಧಾನಿಯಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಇದಕ್ಕಾಗಿ ಜನರ ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದರು.
ಇದಾದ ಎರಡು ದಿನಗಳ ಬಳಿಕ ಉಭಯ ನಾಯಕರು ಭೇಟಿಯಾಗಿದ್ದು, ಹಸ್ತಲಾಘವ ಮಾಡಿ, ಕುಶಲೋಪರಿ ವಿಚಾರಿಸಿದ್ದಾರೆ.

Leave a Reply

Your email address will not be published.