ಕಾಂಗ್ರೆಸ್‌ ನನ್ನನ್ನು ಏಕೆ ಅವಮಾನಿಸುತ್ತಿದೆ ಎಂದ ಮೋದಿಗೆ Social mediaದಲ್ಲಿ ಸಿಕ್ತು ಉತ್ತರ….

ಗುಜರಾತ್‌ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್‌ನವರು ನನ್ನನ್ನು ಇಷ್ಟೊಂದು ಅವಮಾನ ಮಾಡುತ್ತಿದ್ದಾರೆ. ಯಾಕೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ದೇವಧನ್ ಚೌಧರಿ ಎಂಬುವವರು ಕಾಂಗ್ರೆಸ್ ಮೋದಿಯವರನ್ನು ಅವಮಾನ ಮಾಡುತ್ತಿದೆ ಏಕೆಂದರೆ….ಎಂದು 22 ಅಂಶಗಳ ಮೂಲಕ ಉತ್ತರಿಸಿದ್ದಾರೆ. ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಂಗ್ರೆಸ್‌ ಮೋದಿಯವರನ್ನು ಅವಮಾನ ಮಾಡುತ್ತಿದೆ ಏಕೆಂದರೆ…..

1. ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ಮೂವಕ ದೇಶದ ಆರ್ಥಿಕತೆಯನ್ನು ನಾಶ ಮಾಡಿದ್ದಕ್ಕೆ ಹಾಗೂ ನಷ್ಟ ಉಂಟು ಮಾಡಿದ ಜವಾಬ್ದಾರಿಯನ್ನು ಹೊರದಿರುವುದಕ್ಕೆ…

2. ಸಂಘಟಿತ ಧೃವೀಕರಣದ ಮೂಲಕ ದೇಶದ ಪ್ರಾಚೀನ ಬಹುತ್ವದ ಸಂಸ್ಕೃತಿಯ ಪರಂಪರೆಯನ್ನು ನಾಶಪಡಿಸಿದ್ದಕ್ಕೆ…

3. ಹಿಂದುತ್ವ /ಸನಾತನ ಧರ್ಮಗಳ ಆಳವಾದ ಬೋಧನೆಗಳ ಜಾಗದಲ್ಲಿ ಸಾವರ್ಕರ್ ಅವರ ಫ್ಯಾಸಿಸ್ಟ್‌ ಹಿಂದೂ ಧರ್ಮವನ್ನು ಹಿಂದುತ್ವಗೊಳಿಸಿದ್ದಕ್ಕೆ…

4. ನಿಮ್ಮ ನೀತಿಗಳು ಭಾರತವನ್ನು ಹಾನಿಪಡಿಸುತ್ತಿರುವ ಹೊತ್ತಿನಲ್ಲಿ ನಕಲಿ ರಾಷ್ಟ್ರೀಯತೆಯ ಪದಬಂಧವನ್ನು ನಿರಂತರವಾಗಿ ಸೃಷ್ಠಿಸಿದ್ದಕ್ಕೆ…

5. ವಿದೇಶಿ ಹಿತಾಸಕ್ತಿಯ ಪರವಾಗಿ ಹಿಂದುತ್ವ ಪಡೆಗಳನ್ನು ಬೆಂಬಲಿಸಿದ್ದಕ್ಕೆ…

6. ಬಹು ಮಾಧ್ಯಮಗಳಲ್ಲಿ ಪ್ರತಿನಿತ್ಯ ಸುಳ್ಲು ಭರವಸೆಗಳನ್ನು ಹರಡಿದ್ದಕ್ಕೆ..

7. ದೇವತಾವಾದದ ಉಗ್ರ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಮೂಲಕ ಭಾರತದ ಸಂವಿಧಾನದ ಮೂಲಭೂತ ತತ್ವಗಳನ್ನು ಉಲ್ಲಂಘಿಸಿದ್ದಕಕೆ…

8. ಎಂಥದ್ದೇ ಸಂದರ್ಭದಲ್ಲಿ ಸತ್ಯ ಮತ್ತು ನ್ಯಾಯದ ಪರವಾಗಿದ್ದ ಮಾಧ್ಯಮಗಳು ಮತ್ತು ಸಂಸ್ಥೆಗಳನ್ನು ನಾಶಪಡಿಸುವ ಮೂಲಕ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳನ್ನು ನಾಶ ಮಾಡದ್ದಕ್ಕೆ…

9. ದೇಶದ ಬಹುತ್ವದ ಜನರ ಮಾತುಗಳನ್ನು ಕೇಳಿಸಿಕೊಳ್ಳದೆ, ದಬ್ಬಾಳಿಕೆ ಮತ್ತು ಬೆದರಿಕೆಗಳ ಮೂಲಕ ಸರ್ವಾಧಿಕಾರವನ್ನು ಹೇರಲು ಯತ್ನಿಸಿದ್ದಕ್ಕೆ…

10. ವಿದ್ವಾಂಸರು ಮತ್ತು ವಿದ್ಯಾವಂತರ ವಿರುದ್ಧ ದ್ವೇಷವನ್ನು ಬೆಂಬಲಿಸುವ ಮೂಲಕ ಬುದ್ದಿಜೀವಿಗಳ ವಿರೋಧಿಯಾಗಿದ್ದಕ್ಕೆ…

11. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸಲು ತಂತ್ರಗಳನ್ನು ನಡೆಸಿದ್ದಕ್ಕೆ..

12. ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಭಾರತವನ್ನು 2014ಕ್ಕಿಂತ ಕಡಿಮೆ ಇಳಿಸಿದ್ದಕ್ಕೆ..

13. ಭ್ರಷ್ಟಾಚಾರದ ವಿರುದ್ದ ಯುದ್ದ ಮಾಡುತ್ತೇನೆ ಎಂದು ನಕಲಿ ನೈತಿಕತೆಯ ನಾಟಕವಾಡಿ, ವಾಸ್ತವದಲ್ಲಿ ಇದಕ್ಕೆ ವಿರುದ್ದವಾದ ನೀತಿಗಳನ್ನು ಅನುಸರಿಸಿದ್ದಕ್ಕೆ..

14. ಜನ ಕೇಳಬಯಸುವ ಪ್ರಶ್ನೆಗಳನ್ನು ಮರ ಮಾಚಿದ್ದಕ್ಕೆ- ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಸುದ್ದಿಗೋಷ್ಠಿ ನಡೆಸದಿರುವುದಕ್ಕೆ..

15. ದೇಶದ ನೈಜ ಪರಿಸ್ಥಿತಿಯನ್ನು ಮರೆಮಾಚಿ ಪ್ರಚಾರಕ್ಕಾಗಿ ಪ್ರಾಮುಖ್ಯತೆ ನೀಡಿದ್ದಕ್ಕೆ..

16. ದೇಶದ ವಿದೇಶಾಂಗ ನೀತಿಯಲ್ಲಿ ಅಲಿಪ್ತ ನಿಲುವನ್ನು ಹಾಳು ಮಾಡುತ್ತಿರುವುದಕ್ಕೆ..

17. ಭಾಷಣಗಳ ಮೂಲಕ ಅಹಂ, ದ್ವೇಷ, ದುರಾಸೆಗಳಿಗೆ ಪ್ರೇರೇಪಣೆ ನೀಡಿದ್ದಕ್ಕೆ..

18. ಆಡಳಿತ ನಡೆಸುವ ಯಾವುದೇ ಸಾಮರ್ಥ್ಯವಿಲ್ಲದ ಸೈಕೋಪಾತ್‌ಗಳನ್ನು ಸುತ್ತ ಇಟ್ಟುಕೊಂಡಿರುವುದಕ್ಕೆ..

19. ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿ ಭವ್ಯವಾದ ಯೋಚನಗಳ ಕುರಿತು ಗೀಳು ಹಚ್ಚಿಕೊಂಡಿರುವುದಕ್ಕೆ..

20. ಸಾಮಾಜಿಕ ನ್ಯಾಯವನ್ನು ಕಡೆಗಣಿಸಿ, ಅಭಿವೃದ್ಧಿಯನ್ನು ಅಪಾರ್ಥ ಮಾಡಿಕೊಂಡಿರುವುದಕ್ಕೆ..

21. ಧಾರ್ಮಿಕತೆಯ ಅಡಿಯಲ್ಲಿ ನವ ಉದಾರೀಕರಣದ ನೀತಿಗಳನ್ನು ಪಶ್ಚಿಮದಿಂದ ತರುವ ಮೂಲಕ ಬಡವರು ಮತ್ತು ಮಧ್ಯಮ ವರ್ಗದವರನ್ನು ಕೈಬಿಟ್ಟು ಸಿರಿವಂತರ ಪರ ನಿಂತಿರುವುದಕ್ಕೆ..

22. ಹಿಂದುತ್ವ ಮತ್ತು ನವ ಉದಾರೀಕರಣಗಳ ಮೂಲಕ ಸರ್ಕಾರದ ಮೇಲಿದ್ದ ನಂಬಿಕೆಯನ್ನು ಹಾಳು ಮಾಡಿರುವುದಕ್ಕೆ..

ಹೀಗೆ ಮೋದಿಯನ್ನು ಕಾಂಗ್ರೆಸ್‌ ಏಕೆ ಅವಮಾನಸುತ್ತಿದೆ ಎಂಬುದಕ್ಕೆ ವಿವರಣೆ ನೀಡಿದ್ದು, ಇಷ್ಟೆಲ್ಲಾ ಮಾಡಿರುವ ನೀವು ನನ್ನನ್ನು ಏಕೆ ಕಾಂಗ್ರೆಸ್‌ ಅವಮಾನಿಸುತ್ತಿದೆ ಎಂದು ಏಕೆ ಪ್ರಶ್ನೆ ಮಾಡುತ್ತಿದ್ದೀರಿ ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com