Biggboss ಮನೆಯಲ್ಲಿ ಸಂಯುಕ್ತಾ, ಲಾಸ್ಯ : Entry ಕೊಟ್ಟ ದಿನವೇ ಕಿರಿಕ್‌

ಬಿಗ್ಬಾಸ್ ಸೀಸನ್‌ -5ರಲ್ಲಿ ಕಳೆದ ವಾರ ವೈಷ್ಣವಿ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಮನೆಯೊಳಗೆ ಬಂದಿದ್ದು, ಬಳಿಕ ಬೆನ್ನುನೋವಿನ ಕಾರಣದಿಂದ ಮತ್ತೆ ವಾಪಸ್ಸಾಗಿದ್ದರು.

ಅವರು ಮನೆಯಿಂದ ಹೊರಹೋದ ಬಳಿಕ ಕಿರಿಕ್‌ ಪಾರ್ಟಿಯ ಸಂಯುಕ್ತಾ ಹೆಗಡೆ ಹಾಗೂ ಲಾಸ್ಯ ಬಿಗ್‌ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಕಿರಿಕ್‌ ಪಾರ್ಟಿಯ ಸಂಯುಕ್ತಾ ಕಿರಿಕ್‌ ಮಾಡುವುದು ಜಾಸ್ತಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅವರು ಹೋದಲ್ಲೆಲ್ಲಾ ಒಂದಲ್ಲ ಒಂದು ಕಿರಿಕ್ ಮಾಡಿಕೊಳ್ಳುತ್ತಲೇ ಬಂದಿದ್ದಾರೆ.

ಇನ್ನು ಬಿಗ್‌ಬಾಸ್‌ ಮನೆಯೊಳಗೆ ಸಂಯುಕ್ತಾ ಎಂಟ್ರಿ ಕೊಡುತ್ತಿದ್ದಂತೆ ಕಿರಿಕ್ ಮಾಡಿಕೊಂಡಿದ್ದಾರೆ. ಸಂಯುಕ್ತಾ ನೇರ ಮಾತಿನಿಂದಾಗಿ ಮನೆಯವರು ಭಯಪಡುವಂತಹ ಪರಿಸ್ಥಿತಿ ಎದುರಾಗಿದೆ.

ಮೊದಲಿಗೆ ಜಯ ಶ್ರೀನಿವಾಸನ್‌ ಅವರ ನ್ಯೂಮರಾಲಜಿ ಬಗ್ಗೆ ಕೊಂಕಿನ ಮಾತನಾಡಿದ್ದ ಸಂಯುಕ್ತಾ ಅವರ ಕೋಪಕ್ಕೆ ಕಾರಣರಾಗಿದ್ದಾರೆ. ಬಳಿಕ ಜಗನ್ ಅವರಿಗೆ ನಿಮಗೆ ದುಬೈನಲ್ಲಿ ಗರ್ಲ್‌ ಫ್ರೆಂಡ್ ಇದ್ದಾರಲ್ಲ ಎನ್ನುವ ಮೂಲಕ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದಾರೆ. ಅಲ್ಲದೆ ಜೆಕೆಗೂ ಕಾಲೆಳೆದ ಸಂಯುಕ್ತಾ ನಿಮ್ಮ ಹಾಗೂ ಶೃತಿ ಜೋಡಿ ಸೂಪರ್‌ ಎಂದಿದ್ದಾರೆ.

ಸಂಯುಕ್ತಾ ಅವರ ನೇರ ನಡೆ-ನುಡಿಗಳನ್ನು ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಇವರ ಆ್ಯಟಿಟ್ಯೂಡ್ ನೋಡಿದರೆ ಸಂಯುಕ್ತಾ ಫೈನಲ್‌ ಪ್ರವೇಶಿಸಬಹುದು ಎಂದು ಸ್ಪರ್ಧಿಗಳು ಮಾತನಾಡಿಕೊಳ್ಳುವಂತಾಗಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com