Bigg boss : ಜಗನ್‌ಗೆ ಮುತ್ತು ಕೊಟ್ಟಿದ್ದರ ಬಗ್ಗೆ ಆಶಿತಾ ಹೇಳಿದ್ದೇನು…..ನೋಡಿ

ಕಳೆದ ಬಾರಿ ಬಿಗ್‌ಬಾಸ್‌ ಮನೆಯಿಂದ ಆಶಿತಾ ಹೊರಬಂದಿದ್ದಾರೆ. ಈ ವೇಳೆ ಬಿಗ್‌ಬಾಸ್‌ ಮನೆಯಲ್ಲಿದ್ದ ಅನುಭವ, ಜಗನ್ ಗೆ ಮುತ್ತು ಕೊಟ್ಟಿದ್ದರ ಬಗ್ಗೆ ಹಾಗೂ ಸ್ಪರ್ಧಾಳುಗಳ ಬಗ್ಗೆಯೂ ಆಶಿತಾ ಪ್ರತಿಕ್ರಿಯಿಸಿದ್ದಾರೆ.

ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದು ಬೇಸರವಾಗಿದೆ. ಅಲ್ಲಿರುವ ಎಲ್ಲರನ್ನೂ ನಾನು ಮಿಸ್ ಮಾಡಿಕೊಳ್ಳುತ್ತೇನೆ ಎಂದಿರುವ ಆಶಿತಾ, ಜಗನ್‌ಗೆ ಮುತ್ತು ಕೊಟ್ಟದ್ದರ ಬಗ್ಗೆ ವಿವರವಾಗಿ ಹೇಳಿದ್ದಾರೆ.

ಪ್ರತೀ ಬಾರಿಯೂ ಸಿಹಿ ಕಹಿ ಚಂದ್ರು ಅವರು ನಮಗೆ ಅಡುಗೆ ಮಾಡಿ ಬಡಿಸುತ್ತಿದ್ದರು. ಊಟವಾದ ಬಳಿಕ ಧನ್ಯತಾ ಭಾವದಿಂದ ಪ್ರತೀ ಬಾರಿಯೂ ನಾನು ಅವರಿಗೆ ಮುತ್ತು ಕೊಡುತ್ತಿದ್ದೆ. ಅಲ್ಲದೆ ಜೆಕೆಗೂ ಮುತ್ತು ಕೊಟ್ಟಿದ್ದೇನೆ. ಆಗ ಜಗನ್‌ ಎಲ್ಲರಿಗೂ ಮುತ್ತು ಕೊಡುತ್ತೀಯ ನನಗೆ ಕೊಡುವುದಿಲ್ಲವಾ ಎಂದಿದ್ದರು. ಆ ಸಮಯದಲ್ಲೇ ನನಗೆ ಆರೋಗ್ಯ ಸರಿಯಿರಲಿಲ್ಲ. ಆಗ ಜಗನ್‌ ನನ್ನನ್ನು ಕನ್ಫೆಷನ್‌ ರೂಂಗೆ ಕರೆದುಕೊಂಡು ಹೋಗಿದ್ದರು. ನನಗೆ ಸಹಾಯ ಮಾಡಿದವರಿಗೆ ನಾನು ಕೃತಜತಾ ಭಾವದಿಂದ ಅವರಿಗ ಮುತ್ತು ನೀಡಿದ್ದೆನಷ್ಟೇ. ಅದು ಬಿಟ್ಟು ನಮ್ಮಿಬ್ಬರ ಮಧ್ಯೆ ಪ್ರೀತಿ ಇಲ್ಲ. ನಾವಿಬ್ಬರೂ ಸ್ನೇಹಿತರು ಎಂದಿದ್ದಾರೆ.

ಇನ್ನು ಇದೇ ವೇಳೆ ಜಗನ್‌ ಹಾಗೂ ಆಶಿತಾ ಸೇರಿದಂತೆ ಬಿಗ್‌ಬಾಸ್‌ ಮನೆಯಲ್ಲಿರುವ ಸ್ಪರ್ಧಾಳುಗಳ ಕುರಿತು ಟ್ರೋಲ್ ಮಾಡುತ್ತಿದ್ದವರಿಗೆ ಆಶಿತಾ ಬುದ್ದಿಮಾತು ಹೇಳಿದ್ದು, ಎಂದಿಗೂ ನೆಗೆಟಿವ್‌ ಆಗಿ ಟ್ರೋಲ್‌ ಮಾಡಬೇಡಿ. ಎಲ್ಲರ ಮನೆಯಲ್ಲೂ ಇಂತಹ ವಿಚಾರಗಳನ್ನು ಸೂಕ್ಷ್ಮವಾಗಿ ಪರಿಗಣಿಸುತ್ತಾರೆ. ಅಲ್ಲಿದ್ದವರಿಗೆ ಮಾತ್ರ ಗೊತ್ತು ಕಷ್ಟ ಎಷ್ಟೆಂಬುದು. ಟ್ರೋಲ್‌ ಮಾಡುವುದಾದರೆ ಸಕಾರಾತ್ಮಕವಾಗಿ ಮಾಡಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com