BJP ಯವರು ಮನೆಯಲ್ಲಿದ್ದರೆ ರಾಜ್ಯ ಶಾಂತವಾಗಿರುತ್ತದೆ : CM ಸಿದ್ದರಾಮಯ್ಯ

ಬೀದರ್‌ : ಕುಮಟಾ, ಶಿರಸಿಯಲ್ಲಿ ನಡೆದ ಗಲಾಟೆಗೆ ಬಿಜಪಿಯವರೇ ಕಾರಣ. ಬಿಜೆಪಿಯವರು ಮನೆಯಲ್ಲಿ ಸುಮ್ಮನಿದ್ದರೆ ರಾಜ್ಯ ಶಾಂತವಾಗಿರುತ್ತದೆ. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೀದರ್‌ನ ಬಸವ ಕಲ್ಯಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹತ್ಯೆಯಾಗುತ್ತಿರುವುದು, ಕೋಮುಗಲಭೆ ಸೃಷ್ಠಿಸುತ್ತಿರುವುದಕ್ಕೆ ಬಿಜೆಪಿಯವರೇ ಕಾರಣ. ಅವರು ಮನೆಯಲ್ಲಿದ್ದರೆ ರಾಜ್ಯ ಶಾಂತವಾಗಿರುತ್ತದೆ ಎಂದಿದ್ದಾರೆ.

ಪರೇಶ್‌ ಮೇಸ್ತಾ ಹತ್ಯೆ ಕುರಿತು ಮಾತನಾಡಿದ ಸಿಎಂ, ಬಿಜೆಪಿಯವರು ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಿದರೆ ರಾಜ್ ಶಾಂತವಾಗಿರುತ್ತದೆ. ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ಬಿಜೆಪಿಯವರೇ ಎಂದಿದ್ದಾರೆ.

 

Leave a Reply

Your email address will not be published.