ನನ್ನ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್‌ ಉದ್ಭವಿಸದಿದ್ದರೆ ಅಷ್ಟೇ ಸಾಕು : ಅಣ್ಣಾ ಹಜಾರೆ

ಆಗ್ರಾ : ನನ್ನ ಚಳುವಳಿಯಿಂದಾಗಿ ಮತ್ತೊಬ್ಬ ಅರವಿಂದ ಕೇಜ್ರಿವಾಲ್‌ ಉದ್ಭವವಾಗದಿದ್ದರೆ ಅಷ್ಟೇ ಸಾಕು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

ಮುಂಬರುವ  ಮಾರ್ಚ್‌ 23ರಂದು ಅಣ್ಣಾ ಹಜಾರೆ ದೆಹಲಿಯಲ್ಲಿ ಬೃಹತ್‌ ಮಟ್ಟದ ರ್ಯಾಲಿ ಆಯೋಜಿಸಲಿದ್ದು, ಇದರಲ್ಲಿ ರೈತರು ಹೆಚ್ಚಿನ ಮಟ್ಟದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ನನ್ನ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ ಹುಟ್ಟಿಬರದಿದ್ದರೆ ಅಷ್ಟೇ ಸಾಕು ಎಂದಿದ್ದಾರೆ.

ಶಹೀದ್ ಸ್ಮಾರಕದ ಬಳಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಣ್ಣಾ ಹಜಾರೆ, ಜನ್ ಲೋಕ್‌ಪಾಲ್‌ ಮಸೂದೆ ಬಗ್ಗೆ ಬಿಜೆಪಿಯಾಗಲಿ, ಕಾಂಗ್ರೆಸ್‌ ಆಗಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ನಮಗೆ ಬಂಡವಾಳ ಶಾಹಿ ಸರ್ಕಾರದ ಅವಶ್ಯಕತೆ ಇಲ್ಲ. ರೈತರ ಹಿತಾಸಕ್ತಿಗನುಗುಣವಾಗಿ ಕೆಲಸ ಮಾಡುವ ಯಾವುದೇ ಸರ್ಕಾರವಾದರೂ ಸರಿ. ಮೊದಲು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದಿದ್ದಾರೆ.

ಆಮ್‌ ಆದ್ಮಿ ಪಕ್ಷದ ಮುಖಂಡ, ದೆಹಲಿ ಸಿಎಂ, ಅರವಿಂದ ಕೇಜ್ರಿವಾಲ್‌, ಈ ಹಿಂದೆ ಅಣ್ಣಾ ಹಜಾರೆ ಅವರ ಹೋರಾಟದಲ್ಲಿ ಭಾಗಿಯಾಗಿದ್ದು, ಸಾಕಷ್ಟು ಮನ್ನಣೆ ಗಳಿಸಿದ್ದರು. ಬಳಿಕ ತಮ್ಮದೇ ಆದ ಪಕ್ಷವನ್ನು ಸಂಘಟಿಸಿ ದೆಹಲಿ ಮುಖ್ಯಮಂತ್ರಿಯಾಗಿ, ಚಳುವಳಿಯಿಂದ ವಿಮುಕ್ತರಾದರು.

Leave a Reply

Your email address will not be published.