America : ಆಟ ಆಡ್ತಾ ಆಡ್ತಾನೇ 71 ಕೋಟಿ ರೂ ಗಳಿಸಿದ 6ರ ಪೋರ

ವಾಷಿಂಗ್ಟನ್ : ಸಾಮಾನ್ಯವಾಗಿ ಮಕ್ಕಳು ಆಟಿಕೆಗಳ ಜೊತೆ ಆಟವಾಡುವುದನ್ನು ನಾವು ನೋಡಿಯೇ ಇರುತ್ತೇವೆ. ಆಟಿಕೆಗಳಿಗೆ ಖರ್ಚಾಗುತ್ತದೆಯೇ ವಿನಃ ಯಾವುದೇ ಲಾಭ ಇಲ್ಲ. ಆದರೆ ವಾಷಿಂಗ್ಟನ್‌ನಲ್ಲೊಬ್ಬ 6ರ ಬಾಲಕ ಆಟವಾಡುತ್ತಲೇ 71 ಕೋಟಿ ರೂ ಸಂಪಾದಿಸಿದ್ದಾನೆ.

ಇತ್ತೀಚೆಗಷ್ಟೇ ಫೋರ್ಬ್ಸ್‌ ವರ್ಷದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಯೂಟ್ಯೂಬ್‌ ಮೂಲಕ ಅತ್ಯಧಿಕ ಆದಾಯ ಗಳಿಸುತ್ತಿರುವ ಸ್ಟಾರ್‌ಗಳ ಪಟ್ಟಿಯಲ್ಲಿ 6 ವರ್ಷದ ಬಾಲಕನ ಹೆಸರು ಸಹ ಸೇರ್ಪಡೆಯಾಗಿದೆ. ಕೇವಲ ಗೊಂಬೆಗಳ ಜೊತೆ ಆಟವಾಡುವ ಈತ, 71 ಕೋಟಿ ರೂ ಸಂಪಾದಿಸಿದ್ದಾನೆ.

ರ್ಯಾನ್‌ ಎಂಬ ಹೆಸರಿನ ಯುವಕನಿಗೆ ಗೊಂಬೆಗಳೆಂದರೆ ಇಷ್ಚವಂತೆ. ಆದ್ದರಿಂದ ಆತ ಅನೇಕ ರೀತಿಯ ಗೊಂಬೆಗಳನ್ನ ಸಂಗ್ರಹಿಸಿ ಅವುಗಳೊಂದಿಗೆ ಆಟವಾಡುತ್ತಿದ್ದುದನ್ನು ಗಮನಿಸಿದ ರ್ಯಾನ್‌ ತಂದೆ ತಾಯಿ ಅವುಗಳನ್ನು ವಿಡಿಯೊ ಮಾಡಿ ಅದನ್ನು ರ್ಯಾನ್‌ ಟಾಯ್ಸ್ ರಿವ್ಯೂ ಎಂಬ ಯೂಟ್ಯೂಬ್‌ ಚಾನಲ್ ಸೃಷ್ಠಿಸಿ ಅದರಲ್ಲಿ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುತ್ತಾ ಬಂದಿದ್ದಾರೆ.

ಸದ್ಯ ಆ ಚಾನಲ್‌ಗೆ 10 ಲಕ್ಷಕ್ಕೂ ಅಧಿಕ ಮಂದಿ ಸಬ್‌ಸ್ರೈಬ್‌ ಆಗಿದ್ದಾರೆ. ರ್ಯಾನಿ ವಿಡಿಯೊಗಳನ್ನು ನೋಡಿ ಗೊಂಬೆಗಳನ್ನು ಕೊಂಡುಕೊಳ್ಳುತ್ತಿದ್ದಾರಂತೆ. ಈ ವಿಡಿಯೊಗಳಿಗಾಗಿ ಆತನಿಗೆ ಆಯಾ ಕಂಪನಿಗಳಿಂದ ಸಾಕಷ್ಟು ಹಣ ಬರುತ್ತಿದೆ. ಈ ಬಾರಿ ರಯಾನ್‌ 71 ಕೋಟಿ ಸಂಪಾದಿಸುವ ಮೂಲಕ ಯೂಟ್ಯೂಬ್‌ ಸ್ಟಾರ್‌ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com