ವಿರಾಟ್ ಮದ್ವೆ ನಂತರ ಡೇನಿಯಲ್ ಟ್ವೀಟ್ : ‘ ಮ್ಯಾರಿ ಮಿ ಕೊಹ್ಲಿ ‘ ಅಂದಾಕೆ ಹೇಳಿದ್ದೇನು..?

ಇಟಲಿಯಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ಸೋಮವಾರ ಮದುವೆಯಾದರು. ವಿರಾಟ್ ಕೊಹ್ಲಿಯ ಅನೇಕ ಮಹಿಳಾ ಅಭಿಮಾನಿಗಳಿಗೆ ಅಪಾರ ನಿರಾಸೆಯಾಗಿದ್ದಂತೂ ನಿಜ. ಇಂಗ್ಲೆಂಡ್ ಮಹಿಳಾ ತಂಡದ ಕ್ರಿಕೆಟರ್ ಡೇನಿಯಲ್ ವ್ಯಾಟ್ ಕೂಡ ಒಬ್ಬರು.

ಡೇನಿಯಲ್ ವ್ಯಾಟ್ 2014 ರಲ್ಲಿ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ‘ಮ್ಯಾರಿ ಮಿ ಕೊಹ್ಲಿ’ ಎಂದು ಟ್ವೀಟ್ ಮಾಡಿ ವಿರಾಟ್ ಗೆ ಪ್ರಪೋಸ್ ಮಾಡಿದ್ದರು.

ಕೊಹ್ಲಿ – ಅನುಷ್ಕಾರ ವಿವಾಹದ ನಂತರ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್ ಮತ್ತೆ ಟ್ವೀಟ್ ಮಾಡಿದ್ದಾರೆ. ವಿರಾಟ್ ಹಾಗೂ ಅನುಷ್ಕಾಗೆ ಅಭಿನಂದನೆಗಳನ್ನು ಹೇಳಿರುವ ಡೇನಿಯಲ್ ವ್ಯಾಟ್ ನವ ವಿವಾಹಿತರಿಗೆ ಶುಭಹಾರೈಸಿದ್ದಾರೆ.

 

 

Leave a Reply

Your email address will not be published.