ನೀವು ಪ್ರಯಾಣಿಸುವಾಗ ನಿದ್ರೆಗೆ ಜಾರುತ್ತೀರಾ..?? ಗೂಗಲ್ ನಿಮ್ಮನ್ನು ಎಬ್ಬಿಸುತ್ತದೆ..!!

ಇಂದು ಗೂಗಲ್ ಇಲ್ಲದೆಯೇ ನಾವಿಲ್ಲ ಎನ್ನುವಷ್ಟು ನಾವು ಗೂಗಲ್‌ಗೆ ಅಂಟಿಕೊಂಡಿದ್ದೇವೆ. ಅದಕ್ಕೆ ಕಾರಣ ಕೂಡ ಗೂಗಲ್ ನೀಡುತ್ತಿರುವ ಅತ್ಯುತ್ತಮ ಸೇವೆಗಳು.!!
ಗೂಗಲ್ ಇಷ್ಟೆಲ್ಲಾ ಸೇವೆ ನೀಡುತ್ತಿದ್ದರೂ ಸಹ ಈಗಲೂ ಹೊಸ ಹೊಸ ಸೇವೆಗಳನ್ನು ಮತ್ತೆ ತರುವುದನ್ನು ನಿಲ್ಲಿಸುತ್ತಿಲ್ಲ.! ಇದೀಗ ‘ಗೂಗಲ್ ಮ್ಯಾಪ್‌’ ಸೇವೆಗೆ ಮತ್ತೊಂದು ವಿಶಿಷ್ಟ ಫೀಚರ್ ಅನ್ನು ಗೂಗಲ್ ಸಂಸ್ಥೆ ತರಲು ಮುಂದಾಗಿದ್ದು, ಈ ಆಯ್ಕೆ ನಿಮ್ಮನ್ನು ಎದ್ದೇಳಿಸುವ ಕೆಲಸವನ್ನು ಮಾಡಲಿದೆ.!
ಗೂಗಲ್ ನಿಮ್ಮನ್ನು ಎಬ್ಬಿಸುತ್ತದೆ
ಬಸ್ಸಿನಲ್ಲಿಯೋ ಅಥವಾ ರೈಲಿನಲ್ಲಿಯೋ ಪ್ರಯಾಣಿಸುವಾಗ ಜನರು ನಿದ್ದೇ ಹೋದರೆ ಗೂಗಲ್ ನೋಟಿಫಿಕೇಷನ್‌ಗಳ ಮೂಲಕ ಅವರನ್ನು ಎಚ್ಚರಿಸುವ ಕೆಲಸ ಮಾಡಲು ಮುಂದಾಗಿದೆ.! ಇದರಿಂದಾಗಿ ಎಷ್ಟೋ ಜನರು ತಾವು ಇಳಿಯಬೇಕಾದ ಸ್ಥಳದಿಂದ ಮುಂದೆ ಪ್ರಯಾಣಿಸಿ ಆಗಬಹುದಾದ ತೊಂದರೆ ತಪ್ಪಲಿದೆ.!!

ನೀವು ಪ್ರಯಾಣಿಸಬೇಕಾದರೆ ಗುರುತಿಸಿರುವ ಜಾಗವನ್ನು ಗೂಗಲ್ ನೆನಪಿಟ್ಟುಕೊಳ್ಳುತ್ತದೆ. ಬಸ್ಸಿನಲ್ಲಿಯೋ ಅಥವಾ ರೈಲಿನಲ್ಲಿಯೋ ಪ್ರಯಾಣಿಸಿ ನೀವು ಆ ಸ್ಥಳವನ್ನು ತಲುಪಿದ ನಂತರ ನಂತರ ನಿಮ್ಮ ಮೊಬೈಲ್ ಲೊಕೇಷನ್ ಗುರುತಿಸಿ ನಿಮಗೆ ನೋಟಿಫಿಕೇಷನ್‌ಗಳ ಮೂಲಕ ಎಚ್ಚರಿಸುತ್ತದೆ.!!

ಸ್ಮಾರ್ಟ್‌ಫೋನ್ ಲಾಕ್ ಆಗಿದ್ದರೂ ಕೆಲಸ ಮಾಡುತ್ತೆ
ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್ ಲಾಕ್ ಆಗಿದ್ದರೂ ನೀವು ಇಳಿಯಬೇಕಾದ ಸ್ಥಳವನ್ನು ಗುರುತಿಸುವ ಕೆಲಸವನ್ನು ಗೂಗಲ್ ಮ್ಯಾಪ್ ಮಾಡಲಿದೆ. ನೆಟ್‌ವರ್ಕ್ ಮತ್ತು ಆಂಡ್ರಾಯ್ಡ್ ಸಾಧನ ಚಲಿಸುತ್ತಿರುವ ಆಧಾರದಲ್ಲಿ ಗೂಗಲ್ ಮ್ಯಾಪ್ ಕೆಲಸ ನಿರ್ವಹಿಸುತ್ತದೆ ಎನ್ನುತ್ತವೆ ವರದಿಗಳು.!!

ಒಂದು ವೇಳೆ ಪ್ರಯಾಣಿಸುವಾಗ ನಿರ್ದಿಷ್ಟಪಡಿಸಿದ ಸ್ಥಳವನ್ನು ನೀವು ತಲುಪದೆ ಇನ್ನಾವುದೇ ಸ್ಥಳವನ್ನು ತಲುಪಿದ್ದರೂ ಅದರ ಹತ್ತಿರದ ಪ್ರದೇಶಗಳನ್ನು ಕೂಡ ಸ್ವಯಂ ತಿಳಿದು ನಿಮಗೆ ಆಗಾಗ್ಗೆ ಎಚ್ಚರಿಸುತ್ತದೆ. ಒಂದು ವೇಳೆ ನೀವು ಹೋಗುತ್ತಿರುವ ಬಸ್ ಮಾರ್ಗ ಬದಲಾಗಿದ್ದರೂ ಕೂಡ ಗೂಗಲ್ ನಿಮ್ಮನ್ನು ಎಚ್ಚರಿಸುತ್ತದೆ.!!
ಪ್ರಯಾಣಿಸುವವರಿಗೆ ಹೆಚ್ಚು ಸಹಾಯಕವಾಗುವ ಗೂಗಲ್ ಮ್ಯಾಪ್ಸ್‌ನ ಈ ಸೇವೆ ಶೀಘ್ರದಲ್ಲಿಯೇ ಬಳಕೆಗೆ ಬರಲಿದೆ ಎನ್ನಲಾಗಿದೆ. ಆದರೆ, ಗೂಗಲ್ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಈ ವರೆಗೂ ಬಿಡುಗಡೆ ಮಾಡಿಲ್ಲ.!!

Leave a Reply

Your email address will not be published.

Social Media Auto Publish Powered By : XYZScripts.com