CM ಸಿದ್ದರಾಮಯ್ಯನದ್ದು ರಾಕ್ಷಸೀ ಮುಖ, ಕನ್ನಡಿಲಿ ನೋಡಲಿ ಗೊತ್ತಾಗುತ್ತೆ : ಅನಂತ್ ಕುಮಾರ್

ಬೆಳಗಾವಿ : ಸಿಎಂ ಸಿದ್ದರಾಮಯ್ಯನದ್ದು ರಾಕ್ಷಸ ಮುಖ. ಕಾಂಗ್ರೆಸ್‌ನವರು  ಮೊದಲು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರ ಮುಖ ರಾಕ್ಷಸ ಮುಖವೋ, ಮನುಷ್ಯನ ಮುಖವೋ ಗೊತ್ತಾಗುತ್ತದೆ. ಪರೇಶ್‌ನನ್ನು ಚಿತ್ರಹಿಂಸೆ ನೀಡ ಕೊಂದಿದ್ದಾರೆ. ಉತ್ತರ ಕರ್ನಾಟಕದ ಜನ ಶಾಂತಿ ಪ್ರಿಯರು. ಪರೇಶ್‌ ಸಾವು ಮಾನವೀಯತೆಯ ಕಗ್ಗೊಲೆ. ಕೇಸ್ ಮುಚ್ಚ ಹಾಕಲು ಎಲ್ಲಾ ತರಹದ ಸರ್ಕಸ್‌ ನಡೆಸುತ್ತಿದ್ದಾರೆ. ನ್ಯಾಯಯುತವಾಗಿ ತನಿಖೆ ಮಾಡುವ ಮನಸ್ಸು ಕಾಂಗ್ರೆಸ್‌ಗೆ ಇಲ್ಲ  ಎಂದು ಕಿಡಿಕಾರಿದ್ದಾರೆ.

ಪೊಲೀಸ್‌ ಅಧಿಕಾರಿಗಳೂ ಸಮಾಜಘಾತು ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ. ರಾಜ್ಯಸರ್ಕಾರದಿಂದ ನಮಗೆ ನ್ಯಾಯ ಸಿಗುವ ಭರವಸೆಯಿಲ್ಲ. ರಾಜ್ಯದಲ್ಲಿ ಪರೇಶ್‌ ಸೇರಿ 20 ಮಂದಿಯ ಕಗ್ಗೊಲೆಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com