ದೇಶಭಕ್ತರ ಹೆಣಗಳ ಮೇಲೆ CM ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ : ಈಶ್ವರಪ್ಪ

ಬೆಂಗಳೂರು : ಮುಸಲ್ಮಾನ ಗೂಂಡಾಗಳಿಗೆ ಪೊಲೀಸರೇ ಕುಮ್ಮಕ್ಕು ನೀಡುತ್ತಿದ್ದಾರೆ. ದೇಶಭಕ್ತರ ಹೆಣಗಳ ಮೇಲೆ ಸಿಎಂ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿರುವುದಾಗಿ ಬಿಜೆಪಿ ಮುಖಂಡ ಕೆ. ಎಸ್‌ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಕಾರ್ಯಕರ್ತ ಪರೇಶ್‌ ಮೇಸ್ತಾ ಸಾವಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಸುವಂತೆ ಆಗ್ರಹಿಸಿ ವಿಧಾನಸೌಧದೆದುರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೇಶ್‌ ಹತ್ಯೆಯನ್ನು ಮುಚ್ಚಿಹಾಕಲು ಸಿಎಂ ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ. ಪರೇಶ್‌ನದ್ದು ಸಹಜ ಸಾವು ಎಂದು ಬಿಂಬಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ರಾಜ್ಯ ಸರ್ಕಾರವೇ ತಮಗೆ ಹೇಗೆ ಬೇಕೋ ಹಾಗೆ ಮರಣೋತ್ತರ ವರದಿಯನ್ನು ತಿರುಚಿರುವುದಾಗಿ ಆರೋಪಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com