Bagalakote : ರೈತ ಸಂವಾದ ಕಾರ್ಯಕ್ರಮದಲ್ಲಿ ಕೋತಿಗಳ ಕಿತಾಪತಿ

ಬಾಗಲಕೋಟೆ : ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸುವ ವೇಳೆ ಕೋತಿಗಳು ಬಂದು ಸಚಿವರಿಗಾಗಿ ಇಟ್ಟಿದ್ದ ಆಹಾರವನ್ನು ಕಸಿದುಕೊಂಡು ಹೋದ ಪ್ರಸಂಗ ಕೂಡಲಸಂಗಮದಲ್ಲಿ ನಡೆದಿದೆ.

ಸಚಿವ ಕಾಗೋಡು ತಿಮ್ಮಪ್ಪ ರೈತರೊಂದಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಭೂಮಿಯ ಬೆಲೆ ನಿಗದಿ ಕುರಿತಂತೆ ಸಂವಾದ ನಡೆಸುತ್ತಿದ್ದರು ಈ ವೇಳೆ ವೇದಿಕೆ ಮೇಲೆ ಆಗಮಿಸಿದ ಕೋತಿಗಳು ಸಚಿವರಿಗಾಗಿ ಇಟ್ಟಿದ್ದ ಬಿಸ್ಕೆಟ್‌, ಸಿಹಿ ತಿನಿಸು ಸೇರಿದಂತೆ ಅನೇಕ ವಸ್ತುಗಳನ್ನು ಕೊಂಡೊಯ್ದಿವೆ. ಅಲ್ಲದೆ ಸಭೆಯ ಬ್ಯಾನರ್‌ ಮೇಲೆಯೂ ಕುಳಿತು ಕಿತಾಪತಿ ಮಾಡಿವೆ. ಕೋತಿಗಳನ್ನು ಓಡಿಸಲು ಸಿಬ್ಬಂದಿ ಹರಸಾಹಸ ಪಟ್ಟರೂ ಕೋತಿಗಳು ತೆರಳದೆ ವೇದಿಕೆ ಮೇಲೆಯೇ ಆಟವಾಡುತ್ತಿದ್ದವು. ಈ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com