ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಸವಣ್ಣನವರ ಹೆಸರಿಡಲು ಮನವಿ : ಅನಂತ ಕುಮಾರ್

ಹುಬ್ಬಳ್ಳಿ : ಏರ್ ಬಸ್ ೩೧೯ ದೆಟ್ ಜೆಟ್ ವಿಮಾನ ತಂದ ಕೇಂದ್ರ ಸಚಿವದ್ವಯರಿಗೆ ಸಚಿವ ಅನಂತಕುಮಾರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ‘ ಹುಬ್ಬಳ್ಳಿಗೆ ಜೆಟ್ ವಿಮಾನ ತಂದಿರೋದಕ್ಕೆ ಅಭಿನಂದನೆಗಳು. ರಸ್ತೆ‌ ಸಂಪರ್ಕ‌ ಯಾವ ರೀತಿಯೋ, ಅದೇ ರೀತಿ ವಾಯು ಮಾರ್ಗ‌ ಸಂಪರ್ಕವಾಗ್ಬೇಕು ಅನ್ನೋದು ಪ್ರಧಾನಿ ಮೋದಿ ಕನಸು.

ಮೋದಿ ಸರ್ಕಾರ ಬಂದ್ಮೇಲೆ ಮೂರುವರೆ ವರ್ಷದಲ್ಲಿ ೩.೫ ಕೋಟಿ ಜನ ಹೆಚ್ಚು ಪ್ರಯಾಣಿಕರಾಗಿದ್ದಾರೆ. ಎಲ್ಲ ರಾಜ್ಯ‌ ಸರ್ಕಾರಗಳಿಂದಾಗಿ ಈ ಸಾಧನೆ ಮಾಡಲು ಸಾಧ್ಯ ವಾಗಿದೆ. ಮೋದಿ‌ ಸರ್ಕಾರ ‌ಹೊಸದಾಗೆ ಉಡಾನ್ ಯೋಜನೆ ಜಾರಿಗೆ ತಂದಿದೆ. ಹವಾಯಿ ಚಪ್ಪಲಿ ಹಾಕಿದ ವ್ಯಕ್ತಿ ಕೂಡ ವಿಮಾನದಲ್ಲಿ ಸಂಚರಿಸಬೇಕೆಂಬುದು ಮೋದಿ ಕನಸು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣನ ಹೆಸರಿಡಲು ಮನವಿ. ವಿಶ್ವಗುರು ಜಗಜ್ಯೋತಿ ಬಸವೇಶ್ವರರು ಮಹಾ ಮಾನವತಾವಾದಿ. ರಾಜ್ಯ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ರೇ, ಕೇಂದ್ರ ಒಪ್ಪಿಗೆ ಸೂಚಿಸಲಿದೆ.

ಬರುವ ಐದು ವರ್ಷಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ‌ವಿಮಾನಗಳು ಹಾರಾಟ ನಡೆಸುವಂತಾಗಬೇಕು. ಮುಂಬೈ, ಬೆಂಗಳೂರಿಗೆ ಪರ್ಯಾಯವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣವಾಗಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಏರ್‌ ಕಾರ್ಗೊವಾಗಬಹುದು ‘ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೇಳಿಕೆ.

Leave a Reply

Your email address will not be published.

Social Media Auto Publish Powered By : XYZScripts.com