Brazil : ಯುವಕ ಚುಡಾಯಿಸಿದ್ದಕ್ಕೆ ಬಟ್ಟೆ ಬಿಚ್ಚಿದ ಯುವತಿ ಮಾಡಿದ್ದೇನು ?

ಹಿಂದಿನಿಂದಲೂ ಮಹಿಳೆಯರ ಮೇಲೆ ಪುರುಷರ ದಬ್ಬಾಳಿಕೆ ನಡೆಯುತ್ತಲೇ ಇದೆ. ಆದರೆ ಅಂದಿದ್ದಂತೆ ಮಹಿಳೆಯರು ಇಂದು ಇಲ್ಲ. ತಮ್ಮ ಮೇಲೆ ದೌರ್ಜನ್ಯವಾದರೂ ಅಂದು ಸಹಿಸಿಕೊಳ್ಳುತ್ತಿದ್ದ ಮಹಿಳೆ ಇಂದು ಅದನ್ನು ಎದುರಿಸಿ ನಿಲ್ಲುತ್ತಿದ್ದಾಳೆ.

ಹೆಣ್ಣು ಎಷ್ಟೇ ಎತ್ತರಕ್ಕೆ ಬೆಳೆದರೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಮಾತ್ರ ಕಡಿಮೆಯಾಗಿಲ್ಲ. ಪ್ರತಿನಿತ್ಯ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಈ ರೀತಿ ನಡೆಯುತ್ತಲೇ ಇರುತ್ತದೆ.

ಆದರೆ ಬ್ರೆಜಿಲ್ ನಲ್ಲಿ ಮಹಿಳೆಯೊಬ್ಬರನ್ನು ಯುವಕನೊಬ್ಬ ಚುಡಾಯಿಸಿದ ಎಂಬ ಕಾರಣಕ್ಕೆ ಆಕೆ ಉತ್ತರಿಸಿದ ರೀತಿ ಮಾತ್ರ ವಿಚಿತ್ರ ಎನಿಸುತ್ತದೆ. ರಿಬಿರಾವೋ ಸಿಟಿಸೆಂಟರ್‌ಬಳಿ ಯುವಕನೊಬ್ಬ ಮಹಿಳೆಗೆ ಚುಡಾಯಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಯುವಕನನ್ನು ಕೆಳಗೆ ಬೀಳಿಸಿ ಆತನಿಗೆ ಥಳಿಸಿದ್ದಾಳೆ. ಬಳಿಕ ತನ್ನ ಶರ್ಟ್‌ ಬಿಚ್ಚಿ ಶರ್ಟ್‌ನಿಂದಲೂ ಹೊಡೆದಿದ್ದಾಳೆ ಇದರಿಂದ ಯುವಕ ಬೆಚ್ಚಿಬಿದ್ದಿದ್ದಾನೆ.

ರಸ್ತೆಯಲ್ಲೇ ಈ ಪ್ರಕರಣ ನಡೆದಿದ್ದು, ಒಂದಷ್ಟು ಮಂದಿ ಶಾಕ್ ಆಗಿದ್ದರೆ, ಮತ್ತೊಂದಷ್ಟು ಮಂದಿ ಅದನ್ನು ವಿಡಿಯೊ ಮಾಡಿದ್ದು, ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com