ವಿವಾಹ ಬಂಧನದಲ್ಲಿ ವಿರಾಟ್‌-ಅನುಷ್ಕಾ : ಶುರುವಾಯ್ತು ಹೊಸ ಇನ್ನಿಂಗ್ಸ್

ದೆಹಲಿ : ಅನೇಕ ವರ್ಷಗಳಿಂದ ಪ್ರೇಮ ಪಕ್ಷಿಗಳಾಗಿ ವಿಹರಿಸುತ್ತಿದ್ದ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ ಬೆಡಗಿ ಅನುಷ್ಕಾ ಶರ್ಮಾ ಹೊಸ ಇನ್ನಿಂಗ್ಸ್‌ಶುರು ಮಾಡಿದ್ದಾರೆ. ಇಟಲಿಯ ಮಿಲಾನ್ ನಗರದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇದುವರೆಗೂ ಇದ್ದ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.

ಇಬ್ಬರು ಸಪ್ತಪದಿ ತುಳಿದ ವಿಚಾರವನ್ನು ಇಂದು ರಾತ್ರಿ 8ಗಂಟೆಗೆ ಅವರೇ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಫಿಲ್ಮ್‌ಫೇರ್‌ ವರದಿ ಮಾಡಿದೆ. ಅಲ್ಲದೆ ಇದೇ ತಿಂಗಳ 26ರಂದು ಮುಂಬೈನಲ್ಲಿ ಅದ್ದೂರಿಯಾಗಿ ರಿಸೆಪ್ಷನ್‌ ಮಾಡಲು ನಿರ್ಧರಿಸಿರುವುದಾಗಿಯೂ ವರದಿ ಮಾಡಿದೆ.

ಡಿಸೆಂಬರ್‌ನಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಇಬ್ಬರು ಬ್ಯುಸಿಯಾಗಿದ್ದರೂ ಸಮಯ ಮಾಡಿಕೊಂಡು ಇಟಲಿಗೆ ಹಾರಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ಮದುವೆಯಾಗುತ್ತಿರುವುದಾಗಿ ಊಹಾಪೋಹಗಳು ಹಬ್ಬಿದ್ದವು. ಆದರೆ ಈ ಬಗ್ಗೆ ಕೊಹ್ಲಿ ಅಥವಾ ಅನುಷ್ಕಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಶ್ಯಾಂಪೂ ಒಂದರ ಜಾಹೀರಾತಿನಿಂದಾಗಿ ಇಬ್ಬರೂ ಪರಿಚಿತರಾಗಿ ಬಳಿಕ ಸ್ನೇಹ ಬೆಳದಿತ್ತು. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದ್ದು, 2013ರಿಂದ ಡೇಟಿಂಗ್‌ ನಡೆಸುತ್ತಿದ್ದರು.

Leave a Reply

Your email address will not be published.