MS ಮೂರ್ತಿಯವರಿಗೆ ವೆಂಕಟಪ್ಪ ಪ್ರಶಸ್ತಿ ಪ್ರದಾನ : ಸಿಎಂ ಎದುರು ಧಿಕ್ಕಾರ ಕೂಗಿದ ಕಲಾವಿದರು..!

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳ ಪ್ರಧಾನ ಸಮಾರಂಭ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಸಿಎಂ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಪ್ರಶಸ್ತಿಗೆ ಭಾಜನರಾದ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಗಣ್ಯರಿಗೆ  ಸಿಎಂ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚೌಡಯ್ಯ ರಾಷ್ಟ್ರೀಯ  ಪ್ರಶಸ್ತಿ-ರಘುನಾಥ್, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ- ಜಿ.ಮಾದೇಗೌಡ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ‌- ಸಾ.ಉಷಾ, ಗುಬ್ಬಿ ವೀರಣ್ಣ ಪ್ರಶಸ್ತಿ- ತೆರೆಸಮ್ಮ ಡಿಸೋಜಾ, ಬಿ.ವಿ ಕಾರಂತ ಪ್ರಶಸ್ತಿ- ಎಂ ಶ್ರೀನಿವಾಸ ಸತ್ಯನಾರಾಯಣ,  ಕೆ.ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ- ಬಿ.ಎ ಜಮಾದಾರ್, ಕುಮಾರವ್ಯಾಸ ಪ್ರಶಸ್ತಿ-ಶಾಂತಾ ಕೌತಾಳ, ಸಂತ ಶಿಶುನಾಳ ಶರೀಫ ಪ್ರಶಸ್ತಿ-ಅಮಿನ್ ಸಾ ಶರೀಫ ವಠಾರ, ಶಾಂತಲಾ ನಾಟ್ಯ ಪ್ರಶಸ್ತಿ- ನಂದಿನಿ ಈಶ್ವರ್ ಅವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಎಮ್ ಎಸ್ ಮೂರ್ತಿಯವರಿಗೆ ವೆಂಕಟಪ್ಪ ಪ್ರಶಸ್ತಿ ನೀಡಲಾಯಿತು. ಆಗ ಸಭೆಯಲ್ಲಿ ಹಾಜರಿದ್ದ ಕೆಲವರು ‘ ಎಮ್ ಎಸ್ ಮೂರ್ತಿ ಮೋಸ ಮಾಡಿ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೊರಳಲ್ಲಿ ಕಪ್ಪು ಪಟ್ಟಿ  ಧರಿಸಿ ದಿಕ್ಕಾರ ಕೂಗಿದರು. ಎಂ.ಎಸ್ ಮೂರ್ತಿಯವರಿಗೆ ಸಿಎಂ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲೇ ದಿಕ್ಕಾರ ಕೂಗಿದ ಕಲಾವಿಧರು ಎಂ.ಎಸ್ ಮೂರ್ತಿ ಎಂಬುವವರಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಮುಂದೆ ವೆಂಕಟಪ್ಪ ಆರ್ಟ್ ಗ್ಯಾಲರಿ ಫೋರಮ್ ಕಲಾವಿಧರಿಂದ ಆಕ್ರೋಶ ವ್ಯಕ್ತವಾಯಿತು. ಪೋಲೀಸರು ಧಿಕ್ಕಾರ ಕೂಗಿದವರನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published.