ಕಾರವಾರ ಬಂದ್‌ : ಕುಮಟಾದಲ್ಲಿ ಪರಿಸ್ಥಿತಿ ಉದ್ವಿಗ್ನ , ಲಾಠಿಚಾರ್ಜ್‌

ಕಾರವಾರ : ಪರೇಶ್‌ ಮೇಸ್ತಾನ ಸಾವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಕಾರವಾರ ಬಂದ್‌ಗೆ ಕರೆ ನೀಡಿದ್ದು, ಕುಮಟ, ಭಟ್ಕಳ, ಮುಂಡಗೋಡ ಹಾಗೂ ಹೊನ್ನಾವರ ಸೇರಿದಂತೆ ಅನೇಕ ಕಡೆ ಬಂದ್‌ ಯಶಸ್ವಿಯಾಗಿದೆ.
ಇಂದು ಬೆಳಗ್ಗೆನಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಅನೇಕ ಕಡೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಕುಮಟಾದಲ್ಲಿ ಬಿಜೆಪಿ ಪ್ರತಿಭಟನೆ ವಿಕೋಪಕ್ಕೆ ತಲುಪಿದ್ದು, ಪಶ್ಚಿಮ ವಲಯ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ಹೇಮಂತ್ ನಿಂಬಾಳ್ಕರ್‌ ಅವರ ವಾಹನ ಚಾಲಕನಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಲಾಠಿ ಚಾರ್ಜ್‌ ನಡೆಸಿದ್ದಾರೆ. ಅಲ್ಲದೆ ಕುಮಟಾ ಮೈದಾನದ ಬಳಿ ಗಲಾಟೆ ನಡೆದಿದ್ದು, ಪೊಲೀಸರ ವಾಹನಗಳು ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಲ್ಲಿ ಕೆಲ ಪೊಲೀಸರು ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published.

Social Media Auto Publish Powered By : XYZScripts.com