ಜಮ್ಮು – ಕಾಶ್ಮೀರ : ರಕ್ಷಣಾ ಪಡೆಗಳ ಗುಂಡಿಗೆ 3 ಪಾಕ್ ಉಗ್ರರು ಬಲಿ

ರವಿವಾರ ತಡರಾತ್ರಿ ನಡೆದ ಎನ್ಕೌಂಟರ್ ನಲ್ಲಿ ಭಾರತೀಯ ರಕ್ಷಣಾ ಪಡೆಗಳು 3 ಪಾಕ್ ಉಗ್ರರನ್ನು ಹೊಡೆದುರುಳಿಸಿವೆ. ಜಮ್ಮ ಕಾಶ್ಮೀರದ ಹಂದ್ವಾರಾ ಜಿಲ್ಲೆಯ ಉನಿಸೂ ಪ್ರದೇಶದಲ್ಲಿ ರಕ್ಷಣಾ ಪಡೆಗಳು ನಡೆಸುತ್ತಿದ್ದ ಶೋಧ ಕಾರ್ಯದ ವೇಳೆ ಉಗ್ರರೊಂದಿಗೆ ಗುಂಡಿನ ಚಕಮಕಿ ಆರಂಭಗೊಂಡಿದೆ.

ಈ ಎನ್ಕೌಂಟರ್ ನಲ್ಲಿ, ಒಬ್ಬ ಉಗ್ರನನ್ನು ಗಾಯಗೊಂಡಿರುವ ಸ್ಥಿತಿಯಲ್ಲಿ ಬಂಧಿಸಲಾಗಿದ್ದು, ಘಟನೆಯಲ್ಲಿ ಸ್ಥಳೀಯ ನಿವಾಸಿಯಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜಮ್ಮು ಕಾಶ್ಮೀರದ ಸೋಪೋರ್, ಬಾರಾಮುಲ್ಲಾ, ಹಂದ್ವಾರಾ ಹಾಗೂ ಕುಪ್ವಾರಾ ಈ ನಾಲ್ಕೂ ಜಿಲ್ಲೆಗಳಲ್ಲಿ ಅಂತರ್ಜಾಲ ಸೇವೆಯನ್ನ ಸ್ಥಗಿತಗೊಳಿಸಲಾಗಿದೆ.

Image result for 3 terrorists killed unisoo

‘ ಹಂದ್ವಾರಾದ ಉನಿಸೂ ಪ್ರದೇಶದಲ್ಲಿ, ಸಿಆರ್ ಪಿಎಫ್ ಹಾಗೂ ಜಮ್ಮು ಕಾಶ್ಮೀರ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ 3 ಪಾಕ್ ಉಗ್ರರನ್ನು ಹೊಡೆದುರುಳಿಸಲಾಗಿದೆ ‘ ಎಂದು ಜಮ್ಮ ಕಾಶ್ಮೀರದ ಡಿಜಿಪಿ, ಎಸ್ ಪಿ ವೈದ್ ಅವರು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com