ಪತಿಯ ಹತ್ಯೆ ಮಾಡಿ Lover ಮುಖಕ್ಕೆ ಗಂಡನಂತೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿದ ಪತ್ನಿ….ಆಮೇಲೇನಾಯ್ತು…?

ಹೈದರಾಬಾದ್‌ : ಪ್ರಿಯತಮನಿಗಾಗಿ ತನ್ನ ಪತಿಯನ್ನು ಕೊಂದು ಲವರ್‌ ಮುಖವನ್ನು  ಗಂಡನ ಮುಖದಂತೆ ಪ್ಲಾಸ್ಟಿಕ್  ಸರ್ಜರಿ ಮಾಡಿಸಿದ್ದ ಪತ್ನಿಯ ಬಂಡವಾಳ ಬೆಳಕಿಗೆ ಬಂದಿದೆ.
ತೆಲಂಗಾಣದ ಕರ್ನೂಲ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಸ್ವಾತಿ ಎಂಬ ಮಹಿಳೆ ಸುಧಾಕರ್‌ ರೆಡ್ಡಿ ಎಂಬುವವರನ್ನು ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಮದುವೆ ಬಳಿಕ ಸ್ವಾಿಗೆ ರಾಜೇಶ್‌ ಎಂಬಾತನ ಜೊತೆ ಪ್ರೀತಿಯಾಗಿತ್ತು. ಅಲ್ಲದೆ ಇವರಿಬ್ಬರ ಮಧ್ಯೆ ದೈಹಿಕ ಸಂಬಂಧವೂ ನಡೆದಿತ್ತು. ಬಳಿಕ ನನ್ನ ಗಂಡನನ್ನು ಕೊಂದು ಪ್ರೀತಿಸಿದವನ ಜೊತೆ ಇರಲು ಬಯಸಿದ ಸ್ವಾತಿ ಗಂಡನನ್ನು ಹತ್ಯೆ ಮಾಡಿದ್ದಾಳೆ.

ಬಳಿಕ ಪತಿಯ ಶವವನ್ನು ಸಮೀಪದ ನಿರ್ಜನ ಅರಣ್ಯದಲ್ಲಿ ಸುಟ್ಟು ಹಾಕಿದ್ದಾರೆ. ಈ ವಿಷಯ ಯಾರಿಗೂ ತಿಳಿಯದಂತೆ ಮಾಡಲು ನನ್ನ ಗಂಡನಿಗೆ ಅಪಘಾತವಾಗಿದೆ ಎಂದು ಹೇಳಿ ಲವರ್‌ನನ್ನು ಆಸ್ಪತ್ರೆಗೆ ದಾಖಲಿಸಿ ತನ್ನ ಗಂಡನ ಮುಖದಂತೆಯೇ ಆತನಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾಳೆ.
ಆದರೆ ಮಗನ ಆರೈಕೆ ಮಾಡಲು ಆಸ್ಪತ್ರೆಗೆ ಆಗಮಿಸುತ್ತಿದ್ದ ಪೋಷಕರಿಗೆ ಸುಧಾಕರ್‌ನ ವರ್ತನೆಯಲ್ಲಿ ಬದಲಾವಣೆ ಕಂಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕೂಡಲೆ ಪೊಲೀಸರು ಲವರ್‌ ರಾಜೇಶ್‌ನನ್ನು ಬಂಧಿಸಿದ್ದು, ವಿಚಾರಣೆ ನಡೆಸಿದಾಗ ಎಲ್ಲಾ ಮಾಹಿತಿಯನ್ನು ಆತ ಬಾಯ್ಬಿಟ್ಟಿದ್ದಾನೆ. ಸದ್ಯ ಸ್ವಾತಿ ಹಾಗೂ ಆತನ ಪ್ರಿಯತಮ ರಾಜೇಶ್‌ ಪೊಲೀಸರ ವಶದಲ್ಲಿದ್ದಾರೆ.
ತೆಲುಗಿನ ಎವಡು ಸಿನಿಮಾದ ಪ್ರಭಾವದಿಂದ ಸ್ವಾತಿ ಈ ರೀತಿ ಮಾಡಿಸಿರಬಹುದು ಎಂದೂ ಹೇಳಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com