ಸಾವಿಗೆ ಶರಣಾದ ಬೊಮ್ಮರಿಲ್ಲು ಖ್ಯಾತಿಯ ಹಾಸ್ಯನಟ ವಿಜಯ್‌ ಸಾಯಿ

ಹೈದರಾಬಾದ್‌ : ಟಾಲಿವುಡ್‌ನ ಬೊಮ್ಮರಿಲ್ಲು ಖ್ಯಾತಿಯ ಹಾಸ್ಯನಟ ವಿಜಯ್ ಸಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೋಮವಾರ ಬೆಳಗ್ಗೆ ಹೈದರಾಬಾದ್‌ನಲ್ಲಿರುವ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿಜಯ್‌ ಸಾಯಿ ಅವರ ದಹ ಪತ್ತೆಯಾಗಿದೆ. ಮೂಲಗಳ ಪ್ರಕಾರ ಸಾಲಬಾಧೆಯಿಂದ ವಿಜಯ್ ಬೆಸತ್ತಿದ್ದು,, ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಕಳೆದ ಕೆಲ ತಿಂಗಳಿನಿಂದ ವಿಜಯ್‌ ಯಾವುದೇ ಸಿನಿಮಾದಲ್ಲೂ ನಟಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ಸಾಲ ಮಾಡಿದ್ದರು. ಬಳಿಕ ಅವರಿಗೆ ಸಿನಿಮಾಗಳಿಂದ ಆಫರ್‌ ಬರದೆ ಆರ್ಥಿಕ ಸಮಸ್ಯೆ ಹೆಚ್ಚಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸ್ನೇಹಿತರ ಅಭಿಪ್ರಾಯವಾಗಿದೆ.
ಮೊದಲ ಬಾರಿಗೆ ವಿಜಯ್‌ ಸಾಯಿ, ಅಮ್ಮಾಯಿಲು ಅಬ್ಬಾಯಿಲು ಸಿನಿಮಾದ ಮೂಲದ ಹಾಸ್ಯನಟರಾಗಿ ಜನಪ್ರಿಯತೆ ಗಳಿಸಿದ್ದರು. ಬಳಿಕ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಹೆಚ್ಚು ಪ್ರಭಾವ ಬೀರಿರಲಿಲ್ಲ. ಆದರೆ ಬೊಮ್ಮರಿಲ್ಲು ಸಿನಿಮಾದಲ್ಲಿ ಮತ್ತೆ ಅದ್ಭುತ ಪ್ರದರ್ಶನ ನೀಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com